ಚೀನಾ ಅಧ್ಯಕ್ಷ, ನೇಪಾಳ ಪ್ರಧಾನಿಗೆ ' ಅಚ್ಚರಿ' ನೀಡಿದ ಪ್ರಧಾನಿ ಮೋದಿ

Update: 2016-10-17 11:26 GMT

ಗೋವಾ,ಅ.17 : ಬ್ರಿಕ್ಸ್ ಸಮಾವೇಶದಂಗವಾಗಿ ಆಯೋಜಿಸಲಾಗಿದ್ದಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ನೇಪಾಳದ ಪ್ರಧಾನಿ ಪ್ರಚಂಡ ನಡುವಿನ ಸಭೆಗೆ ಅನಿರೀಕ್ಷಿತವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿಅದು ದ್ವಿಪಕ್ಷೀಯ ಸಭೆಯ ಬದಲು ತ್ರಿಪಕ್ಷೀಯ ಸಭೆಯಾಗಿ ಮಾರ್ಪಟ್ಟಿತು. ಇದುಎಲ್ಲರಿಗೂ ಅಚ್ಚರಿ ತಂದ ವಿಚಾರವಾಗಿತ್ತು. ಮೋದಿಈ ಸಭೆಗೆ ಏಕೆ ಆಗಮಿಸಿದರು ಎಂದು ಇನ್ನೂ ತಿಳಿದು ಬಂದಿಲ್ಲ.

ಮೂಲಗಳ ಪ್ರಕಾರನೇಪಾಳದ ಪ್ರಧಾನಿ ಬ್ರೆಜಿಲಿನ ನಿಯೋಗಹೊರ ಹೋಗಲುಕಾದಿದ್ದ ಸಮಯ ಚೀನಾ ಅಧ್ಯಕ್ಷ ಅವರಿಗೆ ಜತೆ ನೀಡಲು ಆಗಮಿಸಿದ್ದರು. ಈ ಸಂದರ್ಭ ಮೋದಿ ಕೂಡ ಅವರೊಡನೆ ಸೇರಿಕೊಂಡರು, ಎಂದು ತಿಳಿದು ಬಂದಿದೆ.

ಶ್ರೀಲಂಕಾ ಪ್ರಧಾನಿಯ ಪುತ್ರ ಪ್ರಕಾಶ್ ದಹಲ್ ಈ ಸಭೆಯ ಹಲವು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಭೆಯನ್ನು ಅವರು ಕಾಕತಾಳೀಯ ಎಂದು ಬಣ್ಣಿಸಿದ್ದಾರೆ. ‘‘ಈ ದೊಡ್ಡ ರಾಷ್ಟ್ರಗಳ ಬೆಂಬಲದೊಂದಿಗೆ ನೇಪಾಳ ಅಭಿವೃದ್ಧಿ ಸಾಧಿಸಬಹುದೆಂದೂ ಅವರು ಹೇಳಿದ್ದಾರೆ.

ನೇಪಾಳದಲ್ಲಿ ತಮ್ಮ ಹೆಚ್ಚಿನ ಪ್ರಭಾವ ಬೀರಲು ಚೀನಾ ಮತ್ತು ಭಾರತ ಪೈಪೋಟಿ ನಡೆಸುತ್ತಿವೆಯೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಚೀನಾ ಅಧ್ಯಕ್ಷರು ಬ್ರಿಕ್ಸ್ ಸಮಾವೇಶಕ್ಕೆ ಆಗಮಿಸುವ ಹಾದಿಯಲ್ಲಿ ನೇಪಾಳಕ್ಕೆ ಭೇಟಿ ನೀಡಲು ಬಹಳ ಹಿಂದೆಯೇ ತೀರ್ಮಾನಿಸಿದ್ದರೂಚೀನಾಕ್ಕೆ ತೀರಾ ಹತ್ತಿರದವರೆಂದು ಹೇಳಲಾದ ಕೆ.ಪಿ. ಒಲಿ ಅವರ ಸ್ಥಾನದಲ್ಲಿ ಪ್ರಚಂಡ ಅವರು ಆಗಸ್ಟ್ ತಿಂಗಳಲ್ಲಿ ಪ್ರಧಾನಿಯಾದಾಗ ಅವರು ತಮ್ಮ ಭೇಟಿಯ ಕಾರ್ಯಕ್ರಮವನ್ನು ರದ್ದು ಪಡಿಸಿದ್ದರು. ತಾವು ಅಧಿಕಾರ ವಹಿಸಿಕೊಂಡ ನಂತರ ಪ್ರಚಂಡ ತಮ್ಮ ಪ್ರಥಮ ವಿದೇಶ ಪ್ರವಾಸದಂಗವಾಗಿ ಭಾರತಕ್ಕೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News