×
Ad

ಸರ್ಕಾರ್ 3 ಫಸ್ಟ್ ಲುಕ್

Update: 2016-10-17 17:24 IST

# ಯಾರಿಗೆ ಯಾವ ಪಾತ್ರ ? 
# ಅಭಿಷೇಕ್ , ಐಶ್ವರ್ಯ ಕುರಿತ ವದಂತಿಗಳಿಗೆ ತೆರೆ 
# ಪ್ರತಿಭಾವಂತ ನಟರ ಸಂಗಮ 
# ಯಾಮಿ ಗೌತಮ್ ಅತ್ಯಂತ ವಿಭಿನ್ನ ಪಾತ್ರ 
# ಟ್ವಿಟರ್ ನಲ್ಲಿ ಗುಟ್ಟು ಬಿಟ್ಟ ನಿರ್ದೇಶಕ ವರ್ಮಾ 

ಖ್ಯಾತ ಬಾಲಿವುಡ್ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ’ಸರ್ಕಾರ್-3’ ಚಿತ್ರದ ಪ್ರಮುಖ ಪಾತ್ರಗಳನ್ನು ಭಾನುವಾರ ಸಂಜೆ ಬಹಿರಂಗಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರನ್ನು ಸರ್ಕಾರ್ ಆಗಿ, ಜಾಕಿ ಶ್ರಾಫ್ ಅಂಥದ್ದೇ ಪಾತ್ರದಲ್ಲಿ ಮಿಂಚಿದ್ದನ್ನು ನೋಡಿದ ನಮಗೆ ಅಚ್ಚರಿಯಾಗುವುದು ಮನೋಜ್ ಬಾಜಪೇಯಿ, ಯಾಮಿ ಗೌತಮ್, ರಾನಿತ್ ರಾಯ್ ಹಾಗೂ ಅಮಿತ್ ಸದ್ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದು. ಸರ್ಕಾರ್ ಸರಣಿಯ ಮೂರನೇ ಚಿತ್ರ ಈ ವರ್ಷಾಂತ್ಯದೊಳಗೆ ಪರದೆ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಸರ್ಕಾರ್-3 ಚಿತ್ರದಲ್ಲಿ ಯಾಮಿ ಗೌತಮ್ ಅವರು ಅನ್ನು ಕರ್ಕರೆ ಪಾತ್ರ ನಿರ್ವಹಿಸುತ್ತಾರೆ. ತನ್ನ ತಂದೆಯನ್ನು ಕೊಂದದ್ದಕ್ಕಾಗಿ ಸರ್ಕಾರ್ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕರ್ಕರೆ ಪಾತ್ರದ ವೈಶಿಷ್ಟ್ಯ.

ಮನೋಜ್ ಬಾಜಪೇಯಿ ಅವರು ಗೋವಿಂದ್ ದೇಶಪಾಂಡೆ ಪಾತ್ರ ನಿರ್ವಹಿಸುವರು. ಇದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂಥ ಉಗ್ರ ಪಾತ್ರ ಎಂದು ವರ್ಮಾ ಬಹಿರಂಗಪಡಿಸಿದ್ದಾರೆ. ಗೋಕುಲ್ ಸಾತಮ್ ಪಾತ್ರ ನಿರ್ವಹಿಸುವವರು ರೋನಿತ್ ರಾಯ್. ಸರ್ ಎಂದು ಕರೆಸಿಕೊಳ್ಳುವ ಪಾತ್ರ ನಿರ್ವಹಿಸುವವರು ಜಾಕಿ ಶ್ರಾಫ್. ಈ ಚಿತ್ರದ ನಿರ್ದೇಶಕರ ಜತೆಗೆ ಶ್ರಾಫ್ ಹಿಂದೆ ರಂಗೀಲಾ ಚಿತ್ರದಲ್ಲಿ ದುಡಿದಿದ್ದರು.

ಭರತ್ ದಾಬೋಲ್ಕರ್ ಅವರದ್ದು ಗೋರಖ್ ರಾಮ್‌ಪುರ್ ಅವರ ಪಾತ್ರ. ರುಕ್ಕುಬಾಯಿ ದೇವಿ ಪಾತ್ರದಲ್ಲಿ ರೋಹಿಣಿ ಹಟ್ಟಂಗಡಿ ಕಾಣಿಸಿಕೊಳ್ಳುವರು. ಅಮಿತಾಬ್ ಬಚ್ಚನ್ ಈ ಹಿಂದಿನಂತೆಯೇ ಸುಭಾಷ್ ನಗ್ರೆಯ ಪಾತ್ರ ನಿರ್ವಹಿಸಲಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಈ ಚಿತ್ರದ ತಾರಾಗಣದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಟ್ವಿಟ್ಟರ್‌ನಲ್ಲಿ ವರ್ಮಾ ಈ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News