ಅರ್ನಬ್ ಗೋಸ್ವಾಮಿ ಅಹಂಕಾರವಿರುವ ಬಫೂನ್: ನ್ಯಾ. ಕಾಟ್ಜು

Update: 2016-10-17 12:16 GMT

ಹೊಸದಿಲ್ಲಿ, ಅಕ್ಟೋಬರ್ 17: ಆಕ್ರಮಣಕಾರಿಯಾಗಿ ಸುದ್ದಿ ಮಂಡಿಸುವ ಭಾರತೀಯ ಮುಖವಾದ ಅರ್ನಬ್ ಗೋಸ್ವಾಮಿಗೆ ವೈ ಕೆಟಗರಿ ಭದ್ರತೆಯನ್ನು ನೀಡಿದ್ದನ್ನು ಜಸ್ಟಿಸ್ ಮಾರ್ಕಂಡೇಯ ಕಾಟ್ಜು ಟೀಕಿಸಿದ್ದಾರೆ. ತಲೆಯಲ್ಲಿ ಏನೂ ಇಲ್ಲದ ಒಳ್ಳೆಯ ಅಹಂಕಾರವಿರುವ ವಿದೂಷಕನನ್ನು ರಕ್ಷಿಸಲು ಇನ್ನು 20 ಭದ್ರತಾ ಗಾರ್ಡ್‌ಗಳಿರುತ್ತಾರೆ ಎಂದು ಕಾಟ್ಜು ಅರ್ನಬ್ ವಿರುದ್ಧ ಟೀಕಾ ಪ್ರಹಾರ ಹರಿಸಿದ್ದಾರೆ. ಅರ್ನಬ್ ಗೋಸ್ವಾಮಿಗೆ ಯಾಕೆ ವೈ ಕೆಟಗರಿ ಸುರಕ್ಷೆ ನೀಡಲಾಗಿದೆ ಎಂದು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ ಕಾಟ್ಜು, ವೈ ಕೆಟಗರಿ ಭದ್ರತೆ ಒದಗಿಸಿರುವುದರಿಂದ ಅರ್ನಬ್ ರನ್ನು ಕಾಯಲು ರಾತ್ರಿ ಹಗಲು ಇಪ್ಪತ್ತರಷ್ಟು ಸುರಕ್ಷ ಗಾರ್ಡ್ ಗಳಿರಬೇಕಾಗುತ್ತದೆ. ಜನರು ನೀಡುವ ತೆರಿಗೆಯಿಂದ ಇದೆಲ್ಲವನ್ನು ಸರಕಾರ ಮಾಡುತ್ತಿದೆ ಎಂದು ಕಾಟ್ಜು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ನಬ್ ಅವರಿಗೆ ಒಂದು ದೊಡ್ಡ ಮೊತ್ತದ ಸಂಬಳ ಖಂಡಿತಾ ನೀಡುತ್ತಿರಬಹುದು. ಹಾಗಿದ್ದೂ ಯಾಕೆ ಸ್ವಂತ ಜೀವವನ್ನು ರಕ್ಷಿಸಲು ಖರ್ಚು ಮಾಡಲು ಅವರಿಗೆ ಆಗುತ್ತಿಲ್ಲ.

ಸಶಸ್ತ್ರ ಸುರಕ್ಷಾ ಗಾರ್ಡ್‌ಗಳನ್ನು ಒದಗಿಸುವ ಹಲವಾರು ಖಾಸಗಿ ಭದ್ರತಾ ಏಜೆನ್ಸಿಗಳಿವೆ. ಯಾಕೆ ಅವರ ಸೇವೆಯನ್ನು ಪಡೆಯಲು ಉತ್ತಮ ಸಂಬಳ ಇರುವ ಅರ್ನಬ್ ಅಥವಾ ಅವರ ಸಂಸ್ಥೆ ಸಿದ್ಧವಾಗುವುದಿಲ್ಲ ಎಂದು ಕಾಟ್ಜು ಪ್ರಶ್ನಿಸಿದ್ದಾರೆ.

ಸರಕಾರದ ಮುಂದೆ ಮಂಡಿಯೂರುವ ಬೇರೆಯೂ ಕೆಲವು ಪತ್ರಕರ್ತರಿಗೂ ಸರಕಾರ ಇದೇರೀತಿ ಸುರಕ್ಷೆಯನ್ನು ಒದಗಿಸಿದೆ. ಇದು ಸಂಪೂರ್ಣ ಪರಿತಾಪಕರವಾದ ವಿಷಯವೇ ಸರಿ ಎಂದು ಕಾಟ್ಜು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News