ಶೇ.96 ಭಾರತೀಯರು ಹೊಟೇಲ್‌ನಲ್ಲಿ ಟಿಪ್ಸ್ ನೀಡುತ್ತಾರೆ: ಸಮೀಕ್ಷಾ ವರದಿ

Update: 2016-10-17 14:20 GMT

ಮುಂಬೈ, ಅ.17: ಸುಮಾರು ಶೇ.96ರಷ್ಟು ಭಾರತೀಯ ಪ್ರಯಾಣಿಕರು ಹೊಟೇಲ್‌ನಲ್ಲಿ ಟಿಪ್ಸ್ ನೀಡುತ್ತಾರೆ. ರೂಂ ಸರ್ವೀಸ್ ಹಾಗೂ ಉತ್ತಮ ಹೌಸ್ ಕೀಪಿಂಗ್ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.

ಸಂಪೂರ್ಣ ಸೇವೆಯ ಆನ್‌ಲೈನ್ ಟ್ರಾವೆಲ್ ಕಂಪೆನಿ ಎಕ್ಸ್‌ಪಿಡಿಯಾದ ‘2016 ಹೊಟೇಲ್ ಇಟಿಕ್ವೆಟ್ ರಿಪೋರ್ಟ್’ ಈ ಮಾಹಿತಿ ನೀಡಿದೆ. ಹೊಟೇಲ್‌ನಲ್ಲಿ ಟಿಪ್ಸ್ ನೀಡುವ ಶೇ.96ರಷ್ಟು ಭಾರತೀಯರಲ್ಲಿ ಶೇ.79 ಮಂದಿ ರೂಂ ಸರ್ವೀಸ್‌ಗಾಗಿ, ಶೇ.51 ಮಂದಿ ಹೌಸ್ ಕೀಪಿಂಗ್‌ನಿಂದ ಖುಷಿಪಟ್ಟು ನೀಡುತ್ತಾರೆ. ಶೇ.39 ಮಂದಿ ಪೋರ್ಟರ್‌ಗಳಿಗೆ ಹೊಟೇಲ್‌ನಲ್ಲಿ ಟಿಪ್ಸ್ ನೀಡುತ್ತಾರೆ.

ಹೊಟೇಲ್‌ಗಳನ್ನು ಬುಕ್ ಮಾಡುವ ವೇಳೆ ಭಾರತೀಯರ ನಡವಳಿಕೆ ಹಾಗೂ ಸಾಧನೆಗಳ ವಿಶ್ಲೇಷಣೆಯಾಗಿರುವ ಈ ಸಮೀಕ್ಷೆಯನ್ನು ಉತ್ತರ ಅಮೆರಿಕದ ಜಿಎಫ್‌ಕೆ ಕಸ್ಟಂ ರೀಸರ್ಚ್ ಆಗಸ್ಟ್‌ನಲ್ಲಿ ಆನ್‌ಲೈನ್ ಮೂಲಕ ನಡೆಸಿತ್ತು. ಕಳೆದ 2 ವರ್ಷಗಳಲ್ಲಿ ಹೊಟೇಲ್‌ಗಳಲ್ಲಿ ರಾತ್ರಿ ಕಳೆದಿದ್ದ 1,014 ಮಂದಿ ವಯಸ್ಕ ಪುರುಷರು ಹಾಗೂ ಮಹಿಳೆಯರನ್ನು ಇದಕ್ಕಾಗಿ ಒಟ್ಟಾರೆಯಾಗಿ ಆರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News