×
Ad

ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸಿಂಗ್ ನೇಮಕ

Update: 2016-10-17 23:55 IST

ಹೊಸದಿಲ್ಲಿ, ಅ.17: ಮಾಜಿ ಶಾಸಕಾಂಗ ಕಾರ್ಯದರ್ಶಿ ಸಂಜಯಸಿಂಗ್, ಭಾರತದ ಕಾನೂನು ಆಯೋಗದ ಸದಸ್ಯ ಕಾರ್ಯ ದರ್ಶಿಯಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈ ನೇಮಕಾತಿ ಮಾಡಿದ್ದು, ಸಿಂಗ್‌ರ ಅಧಿಕಾರಾವಧಿ 2018ರ ಆ.31ರ ವರೆಗಿರಲಿದೆಯೆಂದು ಅಧಿಕೃತ ಆದೇಶ ತಿಳಿಸಿದೆ.
ಭಾರತದ ಕಾನೂನು ಸೇವೆಯ ನಿವೃತ್ತ ಅಧಿಕಾರಿಯಾಗಿರುವ ಸಿಂಗ್, 2014ರ ಆಗಸ್ಟ್‌ನಲ್ಲಿ ಶಾಸಕಾಂಗ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 2015ರ ಸೆ.1ರಂದು ರಚನೆಯಾಗಿರುವ 21 ಕಾನೂನು ಆಯೋಗದ ಅವಧಿ 2018ರ ಆ.31ರ ವರೆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News