×
Ad

ಸ್ಮೃತಿ ನಕಲಿ ಡಿಗ್ರಿ ವಿವಾದ: ನ್ಯಾಯಾಲಯದಿಂದ ಪ್ರಕರಣ ವಜಾ

Update: 2016-10-18 19:28 IST

ಹೊಸದಿಲ್ಲಿ, ಅ.18: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ವಿರುದ್ಧದ ನಕಲಿ ಡಿಗ್ರಿ ಪ್ರಕರಣವನ್ನು ಪಾಟಿಯಾಲ ಹೌಸ್ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅವರು ತನ್ನ ಶೈಕ್ಷಣಿಕ ಅರ್ಹತೆಯ ಕುರಿತು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದರೆಂದು ಆರೋಪಿಸಲಾಗಿತ್ತು.

ಪ್ರಕರಣದ ಸಂಬಂಧ ಸ್ಮೃತಿಯವರಿಗೆ ಸಮನ್ಸ್ ನೀಡಲು ನಿರಾಕರಿಸಿದ ನ್ಯಾಯಾಲಯ, ದೂರು ನೀಡಲು 11 ವರ್ಷ ವಿಳಂಬ ಮಾಡಲಾಗಿದೆ ಹಾಗೂ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಮೂಲ ದಾಖಲೆ ಲಭ್ಯತೆಯ ಕೊರತೆಯಿದೆ ಎಂಬ ನೆಲೆಯಲ್ಲಿ ದೂರನ್ನು ತಳ್ಳಿ ಹಾಕಿದೆ.

ಸ್ಮೃತಿ ಕೇಂದ್ರ ಸಚಿವೆಯಾಗಿದ್ದಾರೆಂಬ ಕಾರಣಕ್ಕಾಗಿ ಕೇವಲ ಅವರಿಗೆ ಕಿರುಕುಳ ನೀಡುವುದಕ್ಕಾಗಿ ಈ ದೂರನ್ನು ಸಲ್ಲಿಸಲಾಗಿದೆಯೆಂದು ನ್ಯಾಯಾಲಯ ದೂರುದಾರರನ್ನು ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News