ಮುಂಬೈ: ಬೆಂಕಿ ಆಕಸ್ಮಿಕ

Update: 2016-10-18 14:03 GMT

ಮುಂಬೈ, ಅ.18: ದಕ್ಷಿಣ ಮುಂಬೈಯಲ್ಲಿಂದು ವಸತಿ ಸಮುಚ್ಚಯವೊಂದರಲ್ಲಿ ಭಾರೀ ಬೆಂಕಿ ಅನಾಹುತವೊಂದು ಸಂಭವಿಸಿದೆ. ದುರಂತದಲ್ಲಿ ಇಬ್ಬರು ಬಲಿಯಾಗಿದ್ದು, ಬೆಂಕಿಯ ಬಲೆಯೊಳಗೆ ಸಿಲುಕಿದ್ದ 11 ಮಂದಿ ನಿವಾಸಿಗಳನ್ನು ಅಗ್ನಿಶಾಮಕರು ರಕ್ಷಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ 20ನೆ ಮಹಡಿಯ ಫ್ಲಾಟ್, ಬಜಾಜ್ ಗ್ರೂಪ್‌ನ ಮಾಲಕರ ಕುಟುಂಬಕ್ಕೆ ಸೇರಿದೆಯೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆಯೆಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಪಿ.ಎಸ್.ರಹಂಗ್ದಾಳೆ ಹೇಳಿದ್ದಾರೆ.

ಗಗನಚುಂಬಿ ಮೇಕರ್ ಟವರ್‌ನ 20ನೆ ಅಂತಸ್ತಿನಲ್ಲಿ ಮುಂಜಾನೆ 6:37ರ ವೇಳೆ ಬೆಂಕಿ ಕಾಣಿಸಿಕೊಂಡಿತು. ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ತಣಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆಯೆಂದು ಅವರು ತಿಳಿಸಿದ್ದಾರೆ.

ಖ್ಯಾತ ಲೇಖಕಿ-ಅಂಕಣಕಾರ್ತಿ ಶೋಭಾ ಡೇ ಅದೇ ಕಟ್ಟಡದ ನಿವಾಸಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News