ಭಯೋತ್ಪಾದಕರ ಅಡಗುದಾಣದಲ್ಲಿ ಚೀನಿ ಧ್ವಜಗಳು ಪತ್ತೆ, 44 ಜನರ ಸೆರೆ

Update: 2016-10-18 18:12 GMT

ಶ್ರೀನಗರ,ಅ.18: ನಿನ್ನೆ ಉಗ್ರಗಾಮಿಗಳ ಶಂಕಿತ ಅಡಗುದಾಣಗಳ ಮೇಲೆ ದಾಳಿಗಳನ್ನು ನಡೆಸಿದ ಭದ್ರತಾ ಪಡೆಗಳು ಬಹುಶಃ ಇದೇ ಮೊದಲ ಬಾರಿಗೆ ಚೀನಿ ಧ್ವಜಗಳನ್ನು ಮತ್ತು ಅಕ್ರಮ ಸಾಮಗ್ರಿಗಳನ್ನು ವಶಪಡಿಸಿಕೊಂಡು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಆರೋಪದಲ್ಲಿ 44 ಜನರನ್ನು ಬಂಧಿಸಿವೆ.
12 ಗಂಟೆಗಳ ಅವಧಿಯಲ್ಲಿ ಬಾರಾಮುಲ್ಲಾ ಹಳೆಯ ಪಟ್ಟಣದಲ್ಲಿನ 700ಕ್ಕೂ ಅಧಿಕ ಮನೆಗಳ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, 44 ಜನರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ಉಗ್ರರ ಹಲವಾರು ಅಡಗುದಾಣಗಳನ್ನು ಭೇದಿಸಲಾಗಿದ್ದು, ಪೆಟ್ರೋಲ್ ಬಾಂಬ್‌ಗಳು,ಚೀನಿ ಮತ್ತು ಪಾಕಿಸ್ತಾನಿ ಧ್ವಜಗಳು,ಲಷ್ಕರ್ ಮತ್ತು ಜೈಷ್‌ನ ಲೆಟರ್‌ಹೆಡ್‌ಗಳು,ಅನಧಿಕೃತ ಮೊಬೈಲ್ ಫೋನ್‌ಗಳು ಮತ್ತು ರಾಷ್ಟ್ರವಿರೋಧಿ ಪ್ರಚಾರ ಸಾಮಗ್ರಿ ಇತ್ಯಾದಿ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯ ವಕ್ತಾರರೋರ್ವರು ಇಂದು ರಾತ್ರಿ ಇಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News