'ದೇಶಭಕ್ತ' ರಾಜಕಾರಣಿಗಳು ಹಾಗೂ ಬಾಲಿವುಡ್ ನಟರ ಅಸಲಿಯತ್ತು ಬಯಲು ಮಾಡಿದ ರೇಣುಕಾ

Update: 2016-10-21 09:19 GMT

ಮುಂಬೈ,ಅ.21: ಖ್ಯಾತ ನಟಿ ರೇಣುಕಾ ಶಹಾನೆ ತಮ್ಮ ಫೇಸ್ ಬುಕ್ ಪೋಸ್ಟ್ ಗಳಿಂದ ಕೂಡ ಖ್ಯಾತಿ ಪಡೆದವರು.ಅಯೋಮಯವಾಗಿರುವ ಇಂದಿನ ಜಗತ್ತಿನಲ್ಲಿ ಆಕೆ ಹೇಳುವುದರಲ್ಲಿ ನ್ಯಾಯ ಹಾಗೂ ಅರ್ಥವಿದೆಯೆಂಬುದು ಹಲವರ ಅಂಬೋಣ. ರಾಜಕಾರಣಿಗಳಂತೂ ಕಚ್ಚಾಡುವುದರಲ್ಲಿಯೇ ಸಮಯ ವ್ಯಯಿಸುತ್ತಿದ್ದು ವಾಸ್ತವತೆಗೆಹೆಚ್ಚು ಒತ್ತು ನೀಡಲು ಕಾಳಜಿಯಿಲ್ಲದವರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರೇಣುಕಾ ಅವರ ಲೇಟೆಸ್ಟ್ ಫೇಸ್ ಬುಕ್ ಪೋಸ್ಟ್ ಒಂದು ನಮ್ಮನ್ನು ಯೋಚನೆಗಿಟ್ಟುಕೊಳ್ಳುವಂತೆ ಮಾಡುತ್ತದೆ. ನಾವು ಯಾರನ್ನು ನಂಬಬೇಕು ? ರಾಜಕಾರಣಿಗಳನ್ನೇ, ಸೆಲೆಬ್ರಿಟಿಗಳನ್ನೇ ಅಥವಾ ನಾವು ಯಾರನ್ನೂ ನಂಬಬಾರದೇ ಎಂಬಂತಹ ಪ್ರಶ್ನೆಗಳನ್ನು ಈ ಪೋಸ್ಟ್ ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ.

ಅಲ್ಪ ಸ್ಮರಣಶಕ್ತಿಯುಳ್ಳವರು ಕೆಲವೊಮ್ಮೆ ಹೇಳುವ ಮಾತುಗಳು.

ಫೆ. 3, 2008 :ಎಂಎನ್‌ಎಸ್ ಮುಂಬೈಂಲ್ಲಿ ಉತ್ತರ ಭಾರತೀಯರನ್ನು ಗುರಿಯಾಗಿಸಿದ ನಂತರ ಶ್ರೀಮತಿ ಜಯಾ ಬಚ್ಚನ್ ಕೇಳುತ್ತಾರೆ ‘‘ಹೂ ಈಸ್ ರಾಜ್ ಠಾಕ್ರೆ ?’’

ಸೆ/ 8, 2008 :ಉತ್ತರ ಪ್ರದೇಶದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಕ್ಕೆ ಹಾಗೂ ಮಹಾರಾಷ್ಟ್ರದ ಬದಲು ಅಲ್ಲಿ ಹುಡುಗಿಯರ ಶಾಲೆಗಳನ್ನು ಸ್ಥಾಪಿಸಿದ್ದಕ್ಕೆಎಂಎನ್‌ಎಸ್ ಬಚ್ಚನ್ ಅವರನ್ನು ಟಾರ್ಗೆಟ್ ಮಾಡಿತ್ತು. ಆಗ ಶ್ರೀಮತಿ ಬಚ್ಚನ್ ಅವರುಚಿತ್ರವೊಂದರ ಸಂಗೀತ ಬಿಡುಗಡೆ ಸಮಾರಂಭವೊಂದರಲ್ಲಿ ಹಿಂದಿಯಲ್ಲಿ ಮಾತನಾಡುತ್ತಾ ಕಟು ಕಮೆಂಟ್ ಒಂದನ್ನು ಮಾಡಿದ್ದರು. ಬಚ್ಚನ್ ಅವರ ‘‘ದಿ ಲಾಸ್ಟ್ ಲಿಯರ್’ ಬಿಡುಗಡೆ ವಿರುದ್ಧ ಎಂಎನ್‌ಎಸ್ ಪ್ರತಿಭಟನೆ ನಡೆಸಿತ್ತು. ಅಷ್ಟೊತ್ತಿಗಾಗಿ ಶ್ರೀಮತಿ ಬಚ್ಚನ್ ಅವರಿಗೆ ರಾಜ್ ಠಾಕ್ರೆ ಯಾರೆಂದು ಗೊತ್ತಾಗಿತ್ತು ಹಾಗೂ ಆಕೆ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಿದರು.

ಅಕ್ಟೋಬರ್ 2016 : ಬಚ್ಚನ್ ಅವರುತಮ್ಮ ಹುಟ್ಟು ಹಬ್ಬದ ಅಂಗವಾಗಿ ರಾಜ್ ಠಾಕ್ರೆ ಬಿಡಿಸಿದತಮ್ಮ ಚಿತ್ರವೊಂದನ್ನು ಅವರಿಂದ ಪಡೆದರು ಹಾಗೂ ತಾವು ರಾಜ್ ಠಾಕ್ರೆ ಪುತ್ರನಿಗೆ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದರು.

ನಂತರ ಬಚ್ಚನ್ ಅವರು ಗುಜರಾತಿನ ಬ್ರ್ಯಾಂಡ್ ಅಂಬಾಸಿಡರ್ ಆದರು.

ಆಗ ಎಂಎನ್‌ಎಸ್ ನಿಂದ ಪ್ರತಿಭಟನೆಗಳಿರಲಿಲ್ಲ.

ಮರಾಠಿ-ಗುಜರಾತಿ ಭಾಯಿಭಾಯಿ ಊಹಿಸಿಕೊಳ್ಳಿ ಆದರೆ ಯುಪಿ-ಮರಾಠಿ ಭಾಯಿ ಭಾಯಿಯಲ್ಲ.

ಈಗ ಕರಣ್ ಜೋಹರ್

ಅಕ್ಟೋಬರ್ 2009 : ವೇಕ್ ಅಪ್ ಸಿದ್ ನಲ್ಲಿ ‘ಮುಂಬೈ’ ಬದಲು ‘ಬಾಂಬೆ’ ಪದದ ಉಪಯೋಗದವಿರುದ್ಧ ಎಂಎನ್ ಎಸ್ ಪ್ರತಿಭಟನೆ. ‘‘ಇದು ನಮ್ಮ ಪಾಲಿನ ನಿಜವಾದ ತಪ್ಪು ಇನ್ನು ಮುಂದೆ ಬಾಂಬೆ ಬದಲು ಮುಂಬೈ ಪದ ಉಪಯೋಗಿಸುತ್ತೇವೆ’’ ಎಂದು ಕರಣ್ ಕ್ಷಮೆ ಯಾಚಿಸುತ್ತಾರೆ.

ಎಂಎನ್‌ಎಸ್ ಪ್ರತಿಭಟನೆಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ.

ಬಾಂಬೆ ಟೈಮ್ಸ್ ಆಗಾಗ ಪ್ರಕಟಗೊಳ್ಳುತ್ತಿತ್ತು.

ಎಂಎನ್‌ಎಸ್ ಪ್ರತಿಭಟನೆ ನಡೆಸಲಿಲ್ಲ.

ಸೆಪ್ಟೆಂಬರ್ 2016 : ಉರಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಹುತಾತ್ಮ ಯೋಧರ ಮೇಲಿನ ಗೌರವದಿಂದಲೇ “ದಿಲ್ ಹೇ ಮುಷ್ಕಿಲ್” ಚಿತ್ರದಲ್ಲಿ ಪಾಕ್ ನಟನಿರುವುದರ ವಿರುದ್ಧ ಎಂಎನ್‌ಎಸ್ ಪ್ರತಿಭಟನೆ

ಫ್ಲ್ಯಾಶ್ ಬ್ಯಾಕ್

26/11/2008 : ಭೀಕರ ಮುಂಬೈ ದಾಳಿಗಳು. ಪಾಕಿಸ್ತಾನಿ ಉಗ್ರರಿಂದ ಹಲವು ನಾಗರಿಕರ ಹತ್ಯೆ.

ಕಸಬ್ ನನ್ನು ಜೀವಂತವಾಗಿ ಸೆರೆಹಿಡಿಯುವಾಗ ತುಕಾರಾಂ ಓಂಬಳೆ ಹುತಾತ್ಮರಾದರು.

ಹಲವಾರು ಯೋಧರು ಹುತಾತ್ಮರಾದರು.

ಹಲವಾರು ಪಾಕಿಸ್ತಾನಿ ಕಲಾವಿದರು, ನಟರು ಹಾಗೂ ಗಾಯಕರು ಇಲ್ಲಿ ಕೆಲಸ ಮಾಡಿ ಹಿಂದಿರುಗುತ್ತಾರೆ.

ಜನವರಿ 2, 2016 :ಪಠಾಣ್ ಕೋಟ್ ನಲ್ಲಿ ಹಲವಾರು ರಕ್ಷಣಾ ಸಿಬ್ಬಂದಿಗಳು ಹುತಾತ್ಮರಾಗುತ್ತಾರೆ.

ಮಾರ್ಚ್ 2016 : ಕಪೂರ್ ಎಂಡ್ ಸನ್ಸ್ ಬಿಡುಗಡೆಯಾಗುತ್ತದೆ ಹಾಗೂ ಹಿಟ್ ಕೂಡ ಆಗುತ್ತದೆ. ಈ ಚಿತ್ರದಲ್ಲಿ ಪಾಕ್ ನಟ ಫಾವದ್ ಖಾನ್ ನಟಿಸಿದ್ದರು.

ಎಂಎನ್‌ಎಸ್ ಪ್ರತಿಭಟನೆ ನಡೆಸಲಿಲ್ಲ.

ಹಾಲಿ ಸ್ಥಿತಿ :

18/10/2016 :ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ಪಾಕ್ ನಟರನ್ನು ಹಾಕುವುದಿಲ್ಲ ಎಂದು ಹೇಳಿ ಕರಣ್ ಜೋಹರ್ ಕ್ಷಮೆಯಾಚಿಸುತ್ತಾರೆ.

ಸಿಂಗಲ್ ಸ್ಕ್ರೀನ್ ಥಿಯೇಟರುಗಳು ಈ ಚಿತ್ರವನ್ನು ಪ್ರದರ್ಶಿಸುವುದಿಲ್ಲ.

ದೇಶದಲ್ಲಿ ಯಾವತ್ತಿನ ಹಾಗೆ ಜನಜೀವನ ಸಾಗುತ್ತದೆ ಎಂದು ನಮ್ಮ ಗೃಹ ಸಚಿವರು ಹೇಳುತ್ತಾರೆ. ಇಲ್ಲಿಗೆ ಬಂದು ಕೆಲಸ ಮಾಡಲು ಪಾಕಿಸ್ತಾನಿಗಳಿಗೆ ವೀಸಾ ನೀಡಲಾಗುವುದು ಎಂದೂ ಅವರು ಹೇಳುತ್ತಾರೆ. ಕೇಂದ್ರ ಸರಕಾರದಿಂದ ಪಾಕ್ ನಟರ ವಿರುದ್ಧ ನಿಷೇಧವಿಲ್ಲ.

ಸರಕಾರದ ನಿರ್ಧಾರದ ವಿರುದ್ಧ ಎಂಎನ್‌ಎಸ್ ಪ್ರತಿಭಟಿಸುವುದಿಲ್ಲ.

ಕರಣ್ ಜೋಹರ್ ಅವರು ಇಂದು ಗೃಹ ಸಚಿವರನ್ನು ಭೇಟಿಯಾಗಲಿದ್ದಾರೆ.

ಫ್ಲ್ಯಾಶ್ ಫಾರ್ವರ್ಡ್ :

ರಾಜ್ ಠಾಕ್ರೆ ಸ್ವತಹ ಬಿಡಿಸಿದ ತಮ್ಮ ಚಿತ್ರವನ್ನು ಕರಣ್ ಜೋಹರ್ ಪಡೆಯುತ್ತಾರೆ.

ಮತ್ತೆ ವರ್ತಮಾನಕ್ಕೆ :

ಸ್ವದೇಶದಲ್ಲಿ ಮೂರು ಯುದ್ಧಗಳನ್ನು ಗೆದ್ದು, ಇತರ ನೆಲಗಳಲ್ಲಿ ಹಲವಾರು ಯುದ್ಧಗಳನ್ನು ಗೆಲ್ಲಲು ಸಹಾಯ ಮಾಡಿ,ಸಾವಿರಾರು ಹೋರಾಟಗಳಲ್ಲಿ ಹಾಗೂ ಸಂಘರ್ಷಗಳಲ್ಲಿ ಗೆದ್ದು,ದೊಡ್ಡ ಸಂಖ್ಯೆಯಲ್ಲಿ ಹುತಾತ್ಮರಾಗಿ, ಆಂತರಿಕ ಸಮಸ್ಯೆಗಳು, ದಂಗೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಭಾರತೀಯರಿಗೆ ಅವರ ಜಾತಿ, ಧರ್ಮ ಮತಗಳ ಬಗ್ಗೆ ಯೋಚಿಸದೆ ಸಹಾಯ ಹಸ್ತ ಚಾಚಿದ ನಮ್ಮ ಸೇನೆಈಗನಮ್ಮ ನಾಡಿನ ಕಾಲಂಶದಷ್ಟು ಚದರ ಕಿಲೋಮೀಟರ್ ವಿಸ್ತೀರ್ಣದ ನಾಡಿನ ಜನರನ್ನು ರಕ್ಷಿಸುತ್ತಿರುವ ಇಸ್ರೇಲಿ ಸೇನೆಯಂತೆ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆದಿದೆಯೆನ್ನಲಾಗಿದೆ.

ನಮ್ಮ ಸೇನೆ ವಿಶ್ವದಲ್ಲಿ ಅತ್ಯುನ್ನತ ಸೇನೆಗಳಲ್ಲೊಂದಾಗಿದೆ ಎಂದು ನಾನು ಯಾವತ್ತೂ ಅಂದುಕೊಂಡಿದ್ದೆ.

ತರುವಾಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸೀಮಿತ ದಾಳಿಗಳ ಸಂಬಂಧ ತೂ ತೂ ಮೈ ಮೈ ನಡೆಯುತ್ತಲೇ ಇದೆ.

ರಾಜಕೀಯ ಕೆಸರೆರಚಾಟವೂ ಮುಂದುವರಿದಿದೆ.

ಭಾರತೀಯ ನಾಗರಿಕರಾದ ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಡು ಭಾರತವನ್ನು ಕಲೆ ಮತ್ತು ಕ್ರೀಡೆಗಳಿಗಿಂತ ಮೇಲೆ ಎಂದು ತಿಳಿಯಬಹುದಾದರೂ ರಾಜಕಾರಣಿಗಳು ಭಾರತವನ್ನು ರಾಜಕೀಯಕ್ಕಿಂತಲೂ ಮೇಲಿಡುವರೇನು ?

ನನಗೆ ಹಾಗನಿಸುತ್ತಿಲ್ಲ.

ಅವರು ಯಾವತ್ತೂ ತಮ್ಮ ಮಾತನ್ನು ಕೃತಿಗಿಳಿಸುತ್ತಾರೆಂದು ನನಗನಿಸುತ್ತಿಲ್ಲ.

ಅಂತಿಮವಾಗಿ ರಾಜಕೀಯವು ದೊಡ್ಡ ಚೆಸ್ ಬೋರ್ಡ್ ಒಂದರಲ್ಲಿ ನಿಜ ಜನರೊಂದಿಗೆ ಆಡುವ ಆಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News