ಬಿಹಾರದ ಡೆಪ್ಯುಟಿ ಸಿಎಂ ತೇಜಸ್ವಿಗೆ ವಾಟ್ಸಾಪ್‌ನಲ್ಲಿ 44,000 ವಿವಾಹ ಪ್ರಸ್ತಾವನೆ..!

Update: 2016-10-21 09:43 GMT

ಪಾಟ್ನಾ, ಅ.21: ಬಿಹಾರದ ಉಪ ಮುಖ್ಯ ಮಂತ್ರಿ ತೇಜಸ್ವಿ ಯಾದವ್‌ ಅವರು ಹಾನಿಗೊಂಡಿರುವ ರಸ್ತೆಯ ಬಗ್ಗೆ ಮಾಹಿತಿ ಒದಗಿಸಲು ನೀಡಿರುವ ಅವರ ಮೊಬೈಲ್‌ ನಂಬ್ರಕ್ಕೆ   ವಾಟ್ಸಾಪ್‌ನಲ್ಲಿ 44,000 ಮದುವೆ ಪ್ರಸ್ತಾವನೆ  ಸಂದೇಶ ಬಂದಿವೆ.
ಸಾರ್ವಜನಿಕ ಕಲ್ಯಾಣ ಇಲಾಖೆಯ ಸಚಿವ ಯಾದವ್‌ ವಾಟ್ಸಾಪ್‌ನಲ್ಲಿ ಒಟ್ಟು 47 ಸಾವಿರ ಸಂದೇಶ ಬಂದಿವೆ. ಆದರೆ ಈ ಪೈಕಿ ಕೇವಲ ಮೂರು ಸಾವಿರ ರಸ್ತೆಗೆ ಸಂಬಂಧಿಸಿದ್ದು, ಉಳಿದ 44 ಸಾವಿರ ಸಂದೇಶಗಳು ಮದುವೆಗೆ ಸಂಬಂಧಿಸಿದ್ದು, ಬಹುತೇಕ ಮಂದಿ ಯುವತಿಯರು  ತೇಜಸ್ವಿ ಯಾದವ್‌ ಅವರನ್ನು ಮದುವೆಯಾಗುವ  ಇಚ್ಛೆ ವ್ಯಕ್ತ ಪಡಿಸಿ ತಮ್ಮ ವೈಯಕ್ತಿಕ ದಾಖಲೆಯನ್ನು ಒದಗಿಸಿದ್ದಾರೆ. ಅಂಕಿ ಅಂಶ, ಮೈಬಣ್ಣ  ಮತ್ತು ಎತ್ತರ ಮತ್ತಿತರ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಪ್ಪತ್ತಾರರ ಹರೆಯದ  ತೇಜಸ್ವಿ ಯಾದವ್‌  ಅವರು ಬಿಹಾರದ ಆರ‍್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಮತ್ತು ಮಾಜಿ ಮುಖ್ಯ ಮಂತ್ರಿ ರಾಬ್ರಿ ದೇವಿ ಅವರ ಕಿರಿಯ ಪುತ್ರ. ರಾಜಕಾರಣಿಯಾಗಿ ಬದಲಾಗಿರುವ ಕ್ರಿಕೆಟಿಗ ತೇಜಸ್ವಿ ಯಾದವ್‌ ಅವರನ್ನು ಮದುವೆ ಪ್ರಸ್ತಾಪದ ಸಂದೇಶಗಳು ಗೊಂದಲಕ್ಕೆ ಸಿಲುಕಿಸಿದೆ.

 ಇಂತಹ ಸಂದೇಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್ "ನನಗೆ   ಅರೆಂಜ್ಡ್ ಮ್ಯಾರೇಜ್ ನಲ್ಲಿ ಆಸಕ್ತಿ. ಇಂತಹ ಸಂದೇಶಗಳ ಬಗ್ಗೆ ತಾನು ತಲೆಕಡಿಸಿಕೊಂಡಿಲ್ಲ''  ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News