ಪಾಕಿಸ್ತಾನದಲ್ಲೂ ಪತಂಜಲಿ ಘಟಕ, ಯೋಗ ಶಿಬಿರ!

Update: 2016-10-21 09:53 GMT

ಹೊಸದಿಲ್ಲಿ, ಅ.21:  ಯೋಗ ಕೂಡ ಒಂದು ಕಲೆ ಎಂದು ಹೇಳಿಕೊಂಡಿರುವ ಯೋಗಗುರು ಬಾಬಾ ರಾಮದೇವ್, ಪಾಕಿಸ್ತಾನದಲ್ಲೂ ಯೋಗ ಶಿಬಿರಗಳನ್ನು ಆಯೋಜಿಸುವ ಬಗ್ಗೆ ತಾನು ತೆರೆದ ಮನಸ್ಸು ಹೊಂದಿದ್ದೇನೆ ಎಂದು ಹೇಳಿದ್ದಾರಲ್ಲದೆ ತಮ್ಮ ಪತಂಜಲಿ ಘಟಕವನ್ನು ಪಾಕಿಸ್ತಾನದಲ್ಲಿ ತೆರೆಯಲೂ ಸಿದ್ಧನಿರುವುದಾಗಿ ಹೇಳಿಕೊಂಡರು. ಆದರೆ ಪಾಕಿಸ್ತಾನಿ ಕಲಾವಿದರು ಮಾಡಿದಂತೆ ತಾನು ಲಾಭವನ್ನು ಭಾರತಕ್ಕೆ ಹಿಂದೆ ತರುವುದಿಲ್ಲ ಎಂದು ಹೇಳಿಕೊಂಡರು. ತಮ್ಮ ಸಂಸ್ಥೆ ಪಾಕಿಸ್ತಾನದಲ್ಲಿ ಗಳಿಸಿದ ಲಾಭವನ್ನು ಅಲ್ಲಿನ ಜನರ ಕಲ್ಯಾಣಕ್ಕಾಗಿ ಉಪಯೋಗಿಸುವುದಾಗಿ ಅವರು ಹೇಳಿದ್ದಾರೆ.

ಉರಿ ದಾಳಿಯನ್ನು ಖಂಡಿಸದ ಪಾಕ್ ಕಲಾವಿದರನ್ನು ಟೀಕಿಸಿದ ಅವರು ‘‘ಕಲಾವಿದರೇನು ಭಯೋತ್ಪಾದಕರಲ್ಲ. ಆದರೆ ಇವರಿಗೆಲ್ಲಾ ಆತ್ಮಸಾಕ್ಷಿಯೆಂಬುದು ಇಲ್ಲವೇ? ಅವರಿಗೆ ಕೇವಲ ತಮ್ಮ ಚಿತ್ರಗಳು ಕೋಟಿಗಟ್ಟಲೆ ಲಾಭ ದೊರೆಯುವುದೇ ಎಂಬುದರ ಚಿಂತೆ ಹಾಗೂ ಬಿರಿಯಾನಿ ತಿನ್ನುವ ತವಕ’’ ಎಂದು ಅವರು ಹೇಳಿದರು.
ತಮ್ಮ ಸಂಸ್ಥೆ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಈಗಾಗಲೇ ತನ್ನ ಘಟಕಗಳನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು.
ಪತಂಜಲಿ ಸ್ವದೇಶಿ ಜೀನ್ಸ್ ತಯಾರಿಸುವುದಾಗಿ ಕಳೆದ ತಿಂಗಳು ಹೇಳಿಕೊಂಡಿದ್ದ ರಾಮದೇವ್ ಸುದ್ದಿಯಲ್ಲಿದ್ದರು. ‘‘ನಾನೊಬ್ಬ ಬಾಬಾ ಎಂದ ಮಾತ್ರಕ್ಕೆ ಆಧ್ಯಾತ್ಮಿಕತೆ ಮತ್ತು ಆಧುನಿಕತೆಯನ್ನು ಜತೆಯಾಗಿಸಬಾರದೆಂದೇನಿಲ್ಲ. ನಮಗೆ ದೇಸಿ ಜೀನ್ಸ್ ಮಾಡಬಹುದು’’ ಎಂದು ಅವರು ಹೇಳಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News