ಮುಖ್ಯಮಂತ್ರಿ ಅಖಿಲೇಶ್ ವಿರುದ್ಧ ಮಲತಾಯಿ ಸಂಚು: ಮುಲಾಯಂಗೆ ಪತ್ರಬರೆದ ಪಕ್ಷದ ಎಮ್ಮೆಲ್ಸಿ
ಲಕ್ನೊ,ಅಕ್ಟೋಬರ್ 21: ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವರ್‌ರ ಕುಟುಂಬದ ಅಂತರ್‌ಕಲಹವನ್ನು ಉದ್ಧರಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರ ಬೆಂಬಲಿಗ ಮತ್ತು ವಿಧಾನ ಪರಿಷತ್ ಸದಸ್ಯ ಉದಯವೀರ್ ಸಿಂಗ್ ನೀಡಿರುವ ಆಶ್ಚರ್ಯಕಾರಿ ಹೇಳಿಕೆ ಬಹಿರಂಗವಾಗಿದೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ. ಅವರು ಮುಲಾಯಂ ಸಿಂಗ್‌ರಿಗೆ ಪತ್ರ ಬರೆದು ಅಖಿಲೇಶ್‌ರಿಗೆ ಪಾರ್ಟಿ ಮತ್ತು ಕುಟುಂಬದಲ್ಲಿ ಎದುರಾಗಿರುವ ಸಕಲ ಸಂಕಷ್ಟಗಳ ಹಿಂದೆ ಮುಲಾಯಂ ಸಿಂಗ್‌ರ ಎರಡನೆ ಪತ್ನಿ ಮತ್ತು ಅಖೆಲೇಶ್‌ರ ಮಲತಾಯಿಯ ಹಸ್ತವಿದೆ ಎಂದು ಉದಯ್‌ವೀರ್ ಸಿಂಗ್ ದೂರಿದ್ದಾರೆ.
ಶಿವಪಾಲ್ ವಿರುದ್ಧವೂ ಆರೋಪ:
ವರದಿಯಾಗಿರುವ ಪ್ರಕಾರ ಎಂಎಲ್ಸಿಯಾಗಿರುವ ಉದಯವೀರ್‌ಸಿಗ್ ಸಮಾಜವಾದಿ ಪಾರ್ಟಿಯ ಪ್ರದೇಶ ಅಧ್ಯಕ್ಷ ಮತ್ತು ಮುಲಾಯಮ್ ಸಹೋದರ ಶಿವಪಾಲ್ ಯಾದವ್ ವಿರುದ್ಧವೂ ಆರೋಪ ಹೊರಿಸಿದ್ದಾರೆ. ಶಿವಪಾಲ್ ಯಾದವ್ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರ ಮಲತಾಯಿಯನ್ನು ರಾಜಕೀಯಕ್ಕೆ ಕರೆತರಲು ಯತ್ನಿಸುತ್ತಿದ್ದಾರೆ. ಆದ್ದರಿಂದ ನಿಮ್ಮ ದೊಡ್ಡ ಪುತ್ರನ ವಿರುದ್ಧ ಕುಟುಂಬದಲ್ಲಿ ನಡೆಯುತ್ತಿರುವ ಸಂಚಿನ ಕುರಿತು ಎಚ್ಚರವಹಿಸಬೇಕೆಂದು ಮುಲಾಯಂ ಸಿಂಗ್‌ರನ್ನು ಉದಯ್‌ವೀರ್ ಸಿಂಗ್ ವಿನಂತಿ ಮಾಡಿದ್ದಾರೆ.
ಅಖಿಲೇಶ್‌ರ ವಿರುದ್ಧ ಅಸೂಯೆ ಭಾವನೆ ನೆಲೆಸಿದೆ:
ಅಖಿಲೇಶ್ ವಿರುದ್ಧ ಒಳಗೊಳಗೆ ಅಸೂಯೆ ಭಾವನೆ ಇರುವುದರಿಂದ ಇವೆಲ್ಲ ನಡೆಯುತ್ತಿವೆ. ನೀವು ಅಖಿಲೇಶ್‌ರನ್ನು ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನದಅಭ್ಯರ್ಥಿ ಎಂದು ತಿಳಿಸಿದ್ದೀರಿ. ನಂತರ ನಿಮ್ಮ ಕುಟುಂಬದಲ್ಲಿ ಅಖಿಲೇಶ್ ವಿರುದ್ಧ ಸಂಚು ಆರಂಭಗೊಂಡಿದೆ. ಸಂಚಿನಲ್ಲಿ ಅಖಿಲೇಶ್‌ರ ಮಲತಾಯಿ ಮರೆಯ ಹಿಂದೆ ನಿಂತು ಅಖಿಲೇಶ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರನ್ನು ರಾಜಕೀಯಕ್ಕೆ ಕರೆತರಲು ಶಿವಪಾಲ್ ಮುಂದಡಿ ಇಟ್ಟಿದ್ದಾರೆ ಎಂದು ಉದಯ್ ವೀರ್ ಸಿಂಗ್ ಹೇಳಿದ್ದಾರೆ.
ಮುಲಾಯಂ ಅಖಿಲೇಶ್‌ರಿಗಾಗಿ ದಾರಿ ಮಾಡಿ:
ಉದಯ್ ವೀರ್ ಸಿಂಗ್ ಮುಲಾಯಂಸಿಂಗ್ ಯಾದವ್‌ರಿಗೆ ನಾಲ್ಕುಪುಟಗಳ ಪತ್ರ ಬರೆದ್ದಿದ್ದು, ಅಖಿಲೇಶ್‌ರಿಗಾಗಿ ದಾರಿ ಸುಗಮಗೊಳಿಸಬೇಕೆಂದು ಅವರನ್ನು ವಿನಂತಿಸಿದ್ದಾರೆ. ಜೊತೆಗೆ ಮಲತಾಯಿ ಮತ್ತು ಅಖಿಲೇಶ್‌ರ ನಡುವೆ ಇರುವ ಮನಸ್ತಾಪವನ್ನು ಕೊನೆಗೊಳಿಸುವುದಕ್ಕೆ ಮುಂದಾಗಬೇಕೆಂದು ಮುಲಾಯಂ ಸಿಂಗ್ ಯಾದವ್‌ರಿಗೆ ಸಲಹೆ ನೀಡಿದ್ದಾರೆ. ಮುಲಾಯಂ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಖಿಲೇಶ್‌ರನ್ನು ಘೋಷಿಸಿದ ಬಳಿಕ ಕುಟುಂಬ ಮತ್ತು ಪಾರ್ಟಿಯಲ್ಲಿ ಅಖಿಲೇಶ್ ವಿರುದ್ಧ ಸಂಚು ತೀವ್ರವಾಗಿದೆ ಎಂದು ವರದಿ ತಿಳಿಸಿದೆ.