ದಿಲ್ಲಿಯ ತ್ಯಾಜ್ಯ ಸಮಸ್ಯೆ ತುಂಬ ಗಂಭೀರ: ಆಪ್ ಸರಕಾರಕ್ಕೆ ಸುಪ್ರೀಂ ತರಾಟೆ

Update: 2016-10-21 10:55 GMT

ಹೊಸದಿಲ್ಲಿ,ಅ.21: ದಿಲ್ಲಿಯ ತ್ಯಾಜ್ಯ ಸಮಸ್ಯೆ ಗಂಭೀರ ಸ್ಥಿತಿಯನ್ನು ತಲುಪಿದೆ ಎಂದು ಇಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಅದನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಯೋಜನೆಯೊಂದನ್ನು ರೂಪಿಸುವಂತೆ ಆಪ್ ಸರಕಾರವು ಸೇರಿದಂತೆ ಸಂಬಂಧಿತರಿಗೆ ಸೂಚಿಸಿದೆ.

ನೈರ್ಮಲ್ಯ ಕಾರ್ಯ ಸ್ಥಳೀಯ ಸಂಸ್ಥೆಗಳ ಕೆಲಸವಾಗಿರುವುದರಿಂದ ನೈರ್ಮಲ್ಯ ಅಭಿಯಾನದಿಂದ ತನ್ನ ಶಾಸಕರನ್ನು ದೂರವಿರಿಸಬೇಕು ಎಂಬ ಆಪ್ ಸರಕಾರದ ಮನವಿಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ನ್ಯಾಯಾಲಯವು, ನೀವು ಸಮಸ್ಯೆಗಳಿಗಾಗಿ ಇತರರನ್ನು ದೂರುತ್ತೀರಿ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಶಾಸಕರಿಗೆ ಯಾವುದೇ ಹೊಣೆಗಾರಿಕೆಯಿಲ್ಲ ಎಂದು ಹೇಳಬೇಡಿ. ನಿಮ್ಮ ಬಳಿ ಅತ್ಯಂತ ಹೆಚ್ಚಿನ ಶಾಸಕರಿದ್ದಾರೆ ಮತ್ತು ನಗರದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತೆ ನೀವು ಅವರಿಗೆ ತಿಳಿಸಬೇಕು ಎಂದು ಹೇಳಿತು.

45 ಮೀಟರ್‌ಗಳಷ್ಟು ಎತ್ತರದ ತ್ಯಾಜ್ಯ ರಾಶಿಗಳು ಅಪಾಯಕಾರಿಯಾಗಿವೆ ಎಂದ ಪೀಠವು, ಸಮರ್ಪಕ ತ್ಯಾಜ್ಯ ವಿಲೇವಾರಿಯಿಲ್ಲದೆ ಜನರು ಸಾಯುತ್ತಿದ್ದಾರೆ ಎಂದು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News