ತನ್ನ ಸ್ವಂತ ಎಟಿಎಂ ಬಳಸುವಂತೆ ಗ್ರಾಹಕರಿಗೆ ಎಸ್‌ಬಿಐ ಸೂಚನೆ

Update: 2016-10-21 12:08 GMT

ಕೋಲ್ಕತಾ,ಅ.21: ಭಾರತೀಯ ಸ್ಟೇಟ್ ಬ್ಯಾಂಕ್ ವಿತರಿಸಿರುವ ಸುಮಾರು 6.50ಲಕ್ಷ ಡೆಬಿಟ್ ಕಾರ್ಡ್‌ಗಳ ಸುರಕ್ಷತೆಯನ್ನು ಹ್ಯಾಕರ್‌ಗಳು ಭೇದಿಸಿರುವ ಹಿನ್ನೆಲೆಯಲ್ಲಿ ತನ್ನ ಸ್ವಂತ ಎಟಿಎಂ ಜಾಲವನ್ನು ಬಳಸುವಂತೆ ಬ್ಯಾಂಕು ತನ್ನ ಗ್ರಾಹಕರಿಗೆ ಸೂಚಿಸಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಎಸ್‌ಬಿಐನ ಎಟಿಎಂ ಜಾಲವನ್ನೇ ಬಳಸುವಂತೆ ನಮ್ಮ ಗ್ರಾಹಕರಿಗೆ ಸಲಹೆ ನೀಡುತ್ತಿದ್ದೇವೆ. ಮುಂದಿನ ಎರಡು ವಾರಗಳಲ್ಲಿ ಗ್ರಾಹಕರ ಬಳಿಯಿರುವ ಡೆಬಿಟ್ ಕಾರ್ಡ್‌ಗಳನ್ನು ಬದಲಿಸಿ ಸುಮಾರು 6 ಲಕ್ಷ ಹೊಸ ಕಾರ್ಡ್ ಗಳನ್ನು ವಿತರಿಸಲು ಬ್ಯಾಂಕು ಉದ್ದೇಶಿಸಿದೆ ಎಂದು ಎಸ್‌ಬಿಐನ ಬಂಗಾಲ ವಲಯದ ಮುಖ್ಯ ಮಹಾ ಪ್ರಬಂಧಕ ಪಾರ್ಥಾ ಪ್ರತಿಮ್ ಸೇನಗುಪ್ತಾ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತನ್ಮಧ್ಯೆ ಬ್ಯಾಂಕು ಮಾಲ್‌ವೇರ್ ದಾಳಿಯಿಂದಾಗಿ ಮಾಹಿತಿಗಳು ಸೋರಿಕೆಯಾಗಿವೆ ಎನ್ನಲಾಗಿರುವ ಡೆಬಿಟ್ ಕಾರ್ಡ್‌ಗಳ ಮೂಲಕ ವಹಿವಾಟನ್ನು ತಡೆಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News