ನೋಬೆಲ್ ಬಹುಮಾನದ ಮೇಲೆ ಕಣ್ಣಿಡುವಂತೆ ವಿಜ್ಞಾನಿಗಳಿಗೆ ಕೇಂದ್ರ ಸಚಿವ ಹರ್ಷವರ್ಧನ್ ಕರೆ

Update: 2016-10-21 14:33 GMT

ಜಮ್ಮು, ಅ.21: ವೈಜ್ಞಾನಿಕ ಪ್ರಯೋಗಗಳ ಕುರಿತು ಹೆಚ್ಚು ಆಸಕ್ತಿ ಬೆಳೆಸಿ, ನೋಬೆಲ್ ಬಹುಮಾನದ ಮೇಲೆ ಕಣ್ಣಿಡುವಂತೆ ಕೇಂದ್ರ ಸಚಿವ ಹರ್ಷವರ್ಧನ್ ಗುರುವಾರ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.

ಜಮ್ಮುವಿನ ಭಾರತೀಯ ಸಮಗ್ರ ಔಷಧ ಸಂಸ್ಥೆಯಲ್ಲಿ (ಐಐಐಎಂ) ವಿಶ್ವ ಆರೋಗ್ಯ ಸಂಘಟನೆಯ ಸಿಜಿಎಂಪಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಹೊಸದಾಗಿ ನಿರ್ಮಿಸಲಾಗಿರುವ ಈ ಘಟಕವು ಫೈಟೊ ಫಾರ್ಮಾಸ್ಯುಟಿಕಲ್ ಔಷಧಗಳ ಆಧಾರಿತ ಔಷಧ ಸಸ್ಯಗಳ ಸಾರ ಸಂಗ್ರಹ, ಸೂತ್ರೀಕರಣ ಹಾಗೂ ಪೊಟ್ಟಣ ಮಾಡುವ ಘಟಕವಾಗಿದೆ.

ಈ ಸ್ವದೇಶಿ ನಿರ್ಮಿತ ಡಬ್ಲುಎಚ್‌ಒದ ಹೊಸ ಸಿಜಿಎಂಪಿ ಘಟಕವು ಐಐಐಎಂನಲ್ಲಿ ಸಂಶೋಧನೆಗೆ ಉತ್ತೇಜನ ನೀಡಲಿದೆ. ಇದು ಭಾರತದ ಸಾರ್ವಜನಿಕ ರಂಗದಲ್ಲಿ ಸ್ಥಾಪಿಸಲ್ಪಟ್ಟಿರುವ ಮೊದಲ ರಾಷ್ಟ್ರೀಯ ಸಿಜಿಎಂಪಿ ಸೌಲಭ್ಯವಾಗಿದೆಯೆಂದು ಕೇಂದ್ರ ವಿಜ್ಞಾನ, ತಂತ್ರಜ್ಞಾನ ಮತ್ತು ಭೂವಿಜ್ಞಾನ ಸಚಿವ ಹರ್ಷವರ್ಧನ್ ಹೇಳಿದರು.

ಜಾಗತಿಕ ಮಾರುಕಟ್ಟೆಯಲ್ಲಿ ಸುರಕ್ಷೆ, ಸಾಮರ್ಥ್ಯ ಹಾಗೂ ಗುಣಮಟ್ಟವನ್ನು ಖಚಿತಪಡಿಸುವ ರಿತಿಯಲ್ಲಿ ಸಸ್ಯಶಾಸ್ತ್ರೀಯ ಫೈಟೊ ಫಾರ್ಮಾಸ್ಯುಟಿಕಲ್‌ಗಳ ಉತ್ಪಾದನೆಯ ಉನ್ನತಮಟ್ಟದ ವಿಶ್ವದರ್ಜೆಯ ಮೂಲ ಸೌಕರ್ಯವನ್ನು ಈ ಸಿಜಿಎಂಪಿ ಘಟಕ ಒದಗಿಸುತ್ತದೆಂದು ಅಧಿಕೃತ ಪ್ರಕಟನೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News