ಪಾಕ್ ಜೊತೆ ವ್ಯಾಪಾರ ನಿಷೇಧ ಯಾಕಿಲ್ಲ?

Update: 2016-10-21 18:18 GMT

ಹೊಸದಿಲ್ಲಿ, ಅ.21: ಭಾರತದಲ್ಲಿ ಪಾಕಿಸ್ತಾನದ ನಟರನ್ನು ನಿಷೇಧಿಸುವ ಕುರಿತು ನಿಲುವಿಗಾಗಿ, ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಬಾಲಿವುಡ್ ನಟ ಅಭಯ್ ದೇವಲ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕುರಿತು ತನ್ನ ಅನಿಸಿಕೆಯನ್ನು ನಿಸ್ಸಂದಿಗ್ಧ ಶಬ್ದಗಳಲ್ಲಿ ಹೇಳೀದರು. ತಾನು ಕೇಂದ್ರ ಸರಕಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವೆಂದು ಅಭಯ್ ನುಡಿದರು.
‘‘ನೀವು ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದನ್ನೇ ನಿಷೇಧಿಸಲು ಬಯಸಿದರೆ, ಬಹಳ ದೂರ ಹೋಗಿ. ಕೇವಲ ಚಿತ್ರ ನಿರ್ಮಾಪಕರನ್ನು ನಿಷೇಧಿಸದಿರಿ. ಅಮದು-ರಫ್ತುಗಳನ್ನೂ ನಿಷೇಧಿಸಿ. ನೀವು ಅರ್ಧ ಕೆಲಸ ಮಾಡಿದರೆ, ನಿಮ್ಮನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಸರಕಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’’ ಎಂದವರು ಕಿಡಿಕಾರಿದರು.
ಅಲ್ಲಿಗೇ ನಿಲ್ಲಿಸದ ಅಭಯ್, ‘‘ಈ ಅದು ನೀವೆಂದಂತೆ ಇಲ್ಲ. ಅದು ನಿಮಗೆ ಭಾರೀ ಪ್ರಚಾರ ನೀಡಿ, ಗದ್ದಲ ಮಾಡುವಂತಿದೆ. ನಮ್ಮ ಜವಾನರಿಗೆ ಸಹಾಯ ಮಾಡಲು ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದನ್ನೇ ಆದರೂ ನಿಷೇಧಿಸಬೇಕೆಂದು ನೀವು ಬಯಸಿದರೆ ಅದನ್ನು ನಾನು ಬೆಂಬಲಿಸುತ್ತೇನೆ’’ ಎಂದರು.
ಯಾವುದೇ ವಿವಾದಕ್ಕೊಳಗಾಗದ ವ್ಯಕ್ತಿತ್ವ ಹಾಗೂ ಎಂದೂ ಯಾವುದೇ ರಾಜಕೀಯ ತಾರತಮ್ಯ ತೋರಿಸದ ಹಿನ್ನೆಲೆಯಲ್ಲಿ ದೇವಲ್‌ರ ಈ ಹೇಳಿಕೆ ಮಹತ್ವ ಪಡೆದಿದೆ. ಅವರ ಸೋದರ ಸಂಬಂಧಿಗರಾದ ಧರ್ಮೇಂದ್ರ ಹಾಗೂ ಹೇಮಮಾಲಿನಿ ಹಿಂದೆ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿದ್ದರು.
ಕರಣ್ ಜೋಹರ್‌ರಂತಹ ಚಿತ್ರ ನಿರ್ಮಾಪಕರಿಗಾಗಿರುವ ತೊಂದರೆಯ ಕುರಿತ ವೌನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಿರ್ಮಾಪಕ ಅನುರಾಗ್ ಕಶ್ಯಪ್ ವಾಗ್ದಾಳಿ ನಡೆಸಿದ ಕೇವಲ ಎರಡು ದಿನಗಳಲ್ಲಿ ದೇವಲ್‌ರ ಈ ಹೇಳಿಕೆ ಹೊರ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News