×
Ad

ಗಡಿಗೆ ಹೋಗಿ ಯುದ್ಧಮಾಡಿ, ಎಂಎನ್‌ಎಸ್‌ಗೆ ನಾಸಿರುದೀನ್ ಶಾ

Update: 2016-10-22 12:28 IST

ಮುಂಬೈ, ಅಕ್ಟೋಬರ್ 22: ಪಾಕ್ ನಟ ಫವಾದ್ ಖಾನ್ ಅಭಿನಯಿಸಿದ “ಏದಿನ್ ಹೈ ಮುಷ್ಕಿಲ್” ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣಸೇನೆಯನ್ನು ಕಠಿಣವಾಗಿ ವಿಮರ್ಶಿಸಿರುವ ಬಾಲಿವುಡ್ ನಟ ನಾಸಿರುದ್ದೀನ್ ಶಾ “ಥಿಯೇಟರ್‌ಗಳನ್ನು ಜಖಂಗೊಳಿಸುತ್ತೇವೆ ಎಂದು ಬೆದರಿಕೆ ಹಾಕುವುದಕ್ಕಿಂತ ಅದರ ಬದಲಿಗೆ ಎಂಎನ್‌ಎಸ್‌ನವರು ಗಡಿಗೆ ಹೋಗಿ ಯುದ್ಧಮಾಡಲಿ”ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಅವರು ಮುಂಬೈಯಲ್ಲಿ ನಡೆದ ಪುಸ್ತಕ ಬಿಡುಗಡೆಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

 ಪ್ರತಿಭಟನಾಕಾರರು ಕಲಾವಿದರನ್ನು ಮಾತ್ರ ಗುರಿಯಾಗಿಟ್ಟಿಲ್ಲ. ಸಿನೆಮಾ ಥಿಯೇಟರ್‌ಗಳನ್ನು ಸುಡುತ್ತೇವೆ ಎಂದು ಹೇಳುತ್ತಿದ್ದಾರೆ. ಇಂತಹ ಶೂರರು ಉರಿಯಲ್ಲಿ ಹೋಗಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲುವ ಕೆಲಸವನ್ನು ಮಾಡಬೇಕಿದೆ. ಏನೇ ಆದರೂ ಸಿನೆಮಾವನ್ನು ಬಿಡುಗಡೆಗೊಳಿಸಬೇಕಾಗಿದೆಯೆಂದು ನಾಸಿರುದ್ದೀನ್ ಶಾ ಆಗ್ರಹಿಸಿದ್ದಾರೆ.

ತಾನುಕರಣ್ ಜೋಹರ್ ಅಭಿಮಾನಿಯಲ್ಲ. ಆದರೂ ಏದಿಲ್ ಹೈ ಮುಷ್ಕಿಲ್ ನೋಡುತ್ತೇನೆ. ಒಬ್ಬ ಕಲಾವಿದನ ಕಲಾಸೃಷ್ಟಿಯ ವಿರುದ್ಧ ಸಮಸ್ಯೆಯನ್ನು ಒಡ್ಡುತ್ತಿರುವಾಗ ಆ ಕಲಾವಿದನಿಗೆ ಬೆಂಬಲ ನೀಡುವುದು ಅನಿವಾರ್ಯವಾಗಿದೆ. ಪಾಕ್ ನಟನನ್ನು ಅಭಿನಯಿಸಿದ್ದಕ್ಕಾಗಿ ಜೋಹರ್ ಕ್ಷಮೆಯಾಚಿಸುವ ಅಗತ್ಯವಿರಲಿಲ್ಲ ಎಂದು ನಾಸಿರುದ್ದೀನ್ ಶಾ ಅಭಿಪ್ರಾಯಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News