×
Ad

ಕೇಂದ್ರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮೊಬೈಲ್‌ ಬಳಕೆ ನಿಷೇಧ..!

Update: 2016-10-22 13:52 IST

ಹೊಸದಿಲ್ಲಿ, ಅ. 22: ಇನ್ನು ಮಂದೆ ಕೇಂದ್ರ ಸಚಿವ ಸಂಪುಟದ ಸಭೆಯ ವೇಳೆ ಮೊಬೈಲ್‌ ಕಿರಿ ಕಿರಿ ಇಲ್ಲ. ಸಭೆಯಲ್ಲಿ   ಅತ್ಯಂತ ವಿವಿಧ ವಿಷಯಗಳ ಬಗ್ಗೆ  ನಡೆಯುವ ಚರ್ಚೆ , ನಿರ್ಧಾರಗಳ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವ   ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸಚಿವಾಲಯವು ಕ್ಯಾಬಿನೆಟ್‌ ಸಭೆಯಲ್ಲಿ ಮೊಬೈಲ್‌ ಬಳಕೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಕೇಂದ್ರ ಸಚಿವರುಗಳು ಕ್ಯಾಬಿನೆಟ್‌ ಸಭೆಗಳಿಗೆ ಮೊಬೈಲ್‌ ಪೋನ್‌ ಗಳನ್ನು ಕೊಂಡೊಯ್ಯುವಂತಿಲ್ಲ.
 " ಇನ್ನು ಮುಂದೆ ಕ್ಯಾಬಿನೆಟ್‌/ಕ್ಯಾಬಿನೆಟ್ ಕಮಿಟಿ ಸಭೆಗಳಿಗೆ ಸ್ಮಾರ್ಟ್‌ ಫೋನ್‌/ಮೊಬೈಲ್‌ ಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ”  ಎಂದು ಕ್ಯಾಬಿನೆಟ್‌ ಕಾರ್ಯದರ್ಶಿ ಅವರು ಕೇಂದ್ರ ಸಚಿವರುಗಳ ಆಪ್ತ ಕಾರ್ಯದರ್ಶಿಗಳಿಗೆ  ಈ ಸಂಬಂಧ ನಿರ್ದೇಶನ ನೀಡಿದ್ದಾರೆ. 
ಮೊದಲ ಬಾರಿ ಸಚಿವರು ಕ್ಯಾಬಿನೆಟ್‌ ಸಭೆಯಲ್ಲಿ ಮೊಬೈಲ್‌ ಬಳಕೆ ಮಾಡುವುದಕ್ಕೆ ಕಡಿವಾಣ ಬಿದ್ದಿದೆ. ಈ ಹಿಂದೆ ಸಚಿವರುಗಳಿಗೆ ಮೊಬೈಲ್‌ಗಳನ್ನು ಕ್ಯಾಬಿನೆಟ್‌ ಸಭೆಗೆ ಕೊಂಡೊಯ್ಯಲು ಅವಕಾಶ ಇದ್ದರೂ, ಸಭೆಯಲ್ಲಿ ಮೊಬೈಲ್‌ಗಳನ್ನು ಸೈಲೆಂಟ್‌ ಮೋಡ್ ಅಥವಾ ಸ್ವಿಚ್‌ ಆಫ್‌ ಮಾಡಿ ಇಡುತ್ತಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News