ಬಾಬ್ ಡೈಲೆನ್ ಗೆ ನೊಬೆಲ್ ಕೊಡಬಾರದಿತ್ತು: ರಸ್ಕಿನ್ ಬಾಂಡ್
ಗುವಾಹಟಿ, ಅಕ್ಟೋಬರ್ 22: ಪಾಪ್ ಗಾಯಕ ಕವಿ ಬಾಬ್ ಡೈಲೆನ್ ಗೆ ಈ ವರ್ಷದ ಸಾಹಿತ್ಯಕ್ಕಿರುವ ನೋಬೆಲ್ ಪಾರಿತೋಷಕವನ್ನುನೀಡಬಾರದಾಗಿತ್ತು ಎಂದು ಪ್ರಸಿದ್ಧ ಸಾಹಿತಿ ರಸ್ಕಿನ್ ಬಾಂಡ್ ಹೇಳಿದ್ದಾರೆಂದು ವರದಿಯಾಗಿದೆ. ಅದುತಪ್ಪು ನಿರ್ಧಾರ. ಈ ಪಾರಿತೋಷಕ ಸಿಕ್ಕಿರುವ ಪ್ರಸಿದ್ಧ ಬರಹಗಾರರನ್ನು ಆಕ್ಷೇಪಿಸುವ ರೀತಿಯಲ್ಲಿ ಸ್ವೀಡಿಶ್ ಅಕಾಡಮಿ ಬಾಬ್ ಡೈಲೆನ್ ಗೆ ಸಾಹಿತ್ಯ ಪಾರಿತೋಷಕ ಘೋಷಿಸಿದೆ ಎಂದು ಅವರು ಹೇಳಿದ್ದಾರೆ.
ಡೈಲನ್ ಒಳ್ಳೆಯ ಸಂಗೀತಜ್ಞನೆ. ಜನರನ್ನು ರಂಜಿಸುವುದು ಅವರಿಗೆ ಗೊತ್ತಿದೆ. ಆದರೆ ಅವರಿಗೆ ಸಾಹಿತ್ಯಕ್ಕಿರುವನೊಬೆಲ್ ಪುರಸ್ಕಾರ ವಿಭಾಗದಲ್ಲಿ ಸೇರಿಸಿದ್ದು ಸರಿಯಲ್ಲ. ಬೇರೆಯಾವುದಾದರೂ ವಿಭಾಗದಲ್ಲಿ ಅವರನ್ನು ಸೇರಿಸಬಹುದಾಗಿತ್ತು. ಎಂದು ನಾರ್ಥ್ ಈಸ್ಟ್ ಸಾಹಿತ್ಯಸಮ್ಮೇಳನದಲ್ಲಿ ಭಾಗವಹಿಸಿದ ಅವರು ಹೇಳಿದ್ದಾರೆ.
ಬರಹಗಾರನಲ್ಲದ ಒಬ್ಬರಿಗೆ ಸಾಹಿತ್ಯದ ಪರಮೋನ್ನತ ಗೌರವ ನೀಡಿರುವುದು ಸರಿಯಲ್ಲ. ಇದಕ್ಕೆ ಮುಂಚೆ ನೊಬೆಲ್ ಸ್ವೀಕರಿಸಿದ ಸಾಹಿತಿಗಳನ್ನು ಅಪಮಾನಿಸಿದ್ದಕ್ಕೆ ಸಮಾನ ಅದು ಎಂದು ಅವರು ನೊಬೆಲ್ ಕಮಿಟಿ ಕೆಲವೊಮ್ಮೆ ಹೀಗೆ ಸರಿಯಲ್ಲದ ತೀರ್ಮಾನ ತಳೆಯುವುದಿದೆ. ಆ ವಿಷಯದಲ್ಲಿ ಯಾರಿಗೂ ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ. 500 ಸಣ್ಣಕಥೆಗಳು ಮತ್ತು ಲೇಖನಗಳನ್ನು ಹಾಗೂಮಕ್ಕಳಿಗಾಗಿ ಐವತ್ತು ಗ್ರಂಥಗಳನ್ನು ರಚಿಸಿರುವ ರಸ್ಕಿನ್ ಬಾಂಡ್ ಇಂಗ್ಲಿಷ್-ಇಂಡಿಯನ್ ಸಾಹಿತ್ಯದ ಪ್ರಮುಖ ವ್ಯಕ್ತಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.