ರಾಜಕೀಯಕ್ಕೆ ಬಾಲಿವುಡ್ ಅಂಜುತ್ತದೆ: ಅಜಯ್ ದೇವಗನ್
Update: 2016-10-22 23:48 IST
ಮುಂಬೈ, ಅ.22: ರಾಷ್ಟ್ರೀಯತೆಯ ವಿಷಯ ಬಂದಾಗ ಚಿತ್ರೋದ್ಯಮವು ಒಗ್ಗಟ್ಟಿನಿಂದಿರುತ್ತದೆ. ಆದರೆ, ನಡುವೆ ರಾಜಕೀಯವನ್ನು ಎಳೆದು ತಂದಾಗ ಅದು ಅಂಜುತ್ತದೆ ಹಾಗೂ ಬಾಗುತ್ತದೆಂದು ನಟ ಅಜಯ್ ದೇವಗನ್ ಹೇಳಿದ್ದಾರೆ.
ಅದು ರಾಷ್ಟ್ರೀಯತೆಯೇ ಅಥವಾ ಹೆದರಿಕೆಯೇ ಎಂಬ ಪ್ರಶ್ನೆಗೆ, ಎರಡೂ ಎಂದು ಅವರುತ್ತರಿಸಿದ್ದಾರೆ.
ರಾಷ್ಟ್ರೀಯತೆಯ ವಿಷಯ ಬಂದಾಗ ತಾನು ದೇಶದ ಪರ ನಿಲ್ಲುತ್ತೇನೆ. ರಾಜಕೀಯದ ವಿಷಯ ಬಂದಾಗ ಉದ್ಯಮಿಯೊಬ್ಬ ಸ್ವಲ್ಪ ಅಂಜುತ್ತಾನೆ. ಏಕೆ ಹೆದರುತ್ತಾನೆಂದರೆ ಇಂದು ನೀವು ಗುಂಪೊಂದರ ವಿರುದ್ಧ ಏನಾದರೂ ಹೇಳಿದರೆ ನಿಮ್ಮ ಚಿತ್ರ ತಡೆಯಲ್ಪಡಬಹುದು ಅಥವಾ ಏನಾದರೂ ಆಗಬಹುದು ಎಂದು ದೇವಗನ್ ಹೇಳಿದ್ದಾರೆ.