ಚೀನಾದ ಕಂಪೆನಿಗಳೊಂದಿಗೆ 5 ಶತಕೋಟಿ ಡಾಲರ್ ಒಪ್ಪಂದಗಳಿಗೆ ಸಹಿ ಹಾಕಿದ ಗುಜರಾತ್!

Update: 2016-10-23 17:49 GMT

ಅಹ್ಮದಾಬಾದ್, ಅ.23: ದೇಶದಲ್ಲಿ ಚೀನದ ವಸ್ತುಗಳ ಬಹಿಷ್ಕಾರದ ಧ್ವನಿ ಗಟ್ಟಿಯಾಗುತ್ತಿರುವಂತೆಯೇ, 2017ರ ವೈಬ್ರಂಟ್ ಗುಜರಾತ್ ಸಮ್ಮೇಳನದ ಪ್ರಚಾರಕ್ಕಾಗಿ ಚೀನಕ್ಕೆ ಭೇಟಿ ನೀಡಿದ್ದ ಗುಜರಾತ್ ಸರಕಾರದ ನಿಯೋಗವೊಂದು ಚೀನ ಕಂಪೆನಿಗಳೊಂದಿಗೆ 5 ಶತಕೋಟಿ ಡಾಲರ್‌ಗಳ ಒಪ್ಪಂದಗಳಿಗೆ ಸಹಿ ಹಾಕಿದೆ.


ಶುಕ್ರವಾರ ತನ್ನ 4 ದಿನಗಳ ಚೀನ ಭೇಟಿಯನ್ನು ಮುಕ್ತಾಯಗೊಳಿಸಿರುವ ನಿಯೋಗವು ಬೀಜಿಂಗ್, ಶಾಂಘಾಯಿ ಗ್ವಾಂಗ್ಝೌ ಹಾಗೂ ಶೆಂಝೆನ್ ನಗರಗಳಿಗೆ ಭೇಟಿ ನೀಡಿತ್ತು. ಗುಜರಾತ್ ಸರಕಾರದ ಕೃಷಿ ಮತ್ತು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ನಿಯೋಗದ ನೇತೃತ್ವ ವಹಿಸಿದ್ದರು.


ಈ ಸಭೆಗಳ ವೇಳೆ ಗುಜರಾತ್ ಸರಕಾರವು ಲಿಯಾನಿಂಗ್ ಪ್ರಾವಿನ್ಸ್ ಆಫ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ, ಡೈನಾಗ್ರೀನ್ ಎನ್‌ವಯರ್ನ್‌ಮೆಂಟಲ್ ಪ್ರೊಟೆಕ್ಷನ್ ಗ್ರೂಪ್ ಕೊ.ಲಿ, ಜೆಸಿಎಚ್‌ಕೆ ಹೋಲ್ಡಿಂಗ್ಸ್ ಕೊ.ಲಿ., ಚೆಂಗ್ಡು ಕ್ಸಿಂಗ್ರಾಂಗ್ ಗ್ರೂಪ್, ಪೆಸಿಫಿಕ್ ಕನ್‌ಸ್ಟ್ರಕ್ಷನ್ ಗ್ರೂಪ್, ಝಡ್‌ಟಿಇ ಸಾಫ್ಟ್ ಟೆಕ್ನಾಲಜಿ ಕೊ.ಲಿ ಹಾಗೂ ಸಿನೊಮಾ ತೈಶಾನ್ ಫೈಬರ್ ಗ್ಲಾಸ್ ಇಂಕ್‌ಗಳೊಂದಿಗೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ.


ಇವು, ಜವಳಿ, ಸೌರವಿದ್ಯುತ್, ಫೈಬರ್ ಗ್ಲಾಸ್, ನವೀಕೃತ ಇಂಧನಕ್ಕಾಗಿ ತ್ಯಾಜ್ಯ ಸಂಸ್ಕರಣೆ, ಆಟೊಮೊಬೈಲ್ಸ್, ಸಾಫ್ಟ್‌ವೇರ್ ತಂತ್ರಜ್ಞಾನ ಉತ್ಪಾದನಾ ಕೈಗಾರಿಕಾ ಪಾರ್ಕ್ ಹಾಗೂ ಮೂಲ ಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News