×
Ad

ಭಾರತಕ್ಕೆ ಬರುವ ದಾರಿಯಲ್ಲಿ ಕೆಟ್ಟು ನಿಂತ ನ್ಯೂಝಿಲ್ಯಾಂಡ್ ಪ್ರಧಾನಿ ವಿಮಾನ

Update: 2016-10-24 22:17 IST

ಸಿಡ್ನಿ, ಅ. 24: ಸೋಮವಾರ ಭಾರತಕ್ಕೆ ಬರುವ ದಾರಿಯಲ್ಲಿ ಉತ್ತರ ಆಸ್ಟ್ರೇಲಿಯದಲ್ಲಿ ವಿಮಾನ ಕೆಟ್ಟು ಹೋದ ಹಿನ್ನೆಲೆಯಲ್ಲಿ, ನ್ಯೂಝಿಲ್ಯಾಂಡ್ ಪ್ರಧಾನಿ ಜಾನ್ ಕೀ ಅವರ ಭಾರತ ಭೇಟಿ ವಿಳಂಬವಾಗಿದೆ.


‘‘ನಮ್ಮ ಲೆಕ್ಕಾಚಾರದಂತೆ ನಡೆಯಲಿಲ್ಲ’’ ಎಂದು ಕ್ವೀನ್ಸ್‌ಲ್ಯಾಂಡ್‌ನ ಕರಾವಳಿ ನಗರ ಟೌನ್ಸ್‌ವಿಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಈ ವಿಳಂಬದಿಂದಾಗಿ, ಮುಂಬೈಯಲ್ಲಿ ಭಾರತೀಯ ಉದ್ಯಮಿಗಳೊಂದಿಗೆ ಏರ್ಪಾಡಾಗಿದ್ದ ಸಭೆಗಳು ರದ್ದುಗೊಂಡಿವೆ. ಇನ್ನು ನ್ಯೂಝಿಲ್ಯಾಂಡ್ ಪ್ರಧಾನಿಯ ನಿಯೋಗವು ಮಂಗಳವಾರ ಬೇರೆ ವಿಮಾನದಲ್ಲಿ ನೇರವಾಗಿ ಹೊಸದಿಲ್ಲಿಗೆ ತೆರಳಲಿದೆ ಎಂದು ಪ್ರಧಾನಿಯ ವಕ್ತಾರ ಮೈಕಲ್ ಫಾಕ್ಸ್ ‘ರಾಯ್ಟರ್ಸ್’ಗೆ ತಿಳಿಸಿದರು.
ಭಾರತೀಯ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಅವರ ನಿಗದಿತ ಸಭೆ ನಡೆಯಲಿದೆ.


ಕೀ ಅವರ ರಾಯಲ್ ನ್ಯೂಝಿಲ್ಯಾಂಡ್ ಏರ್ ಫೋರ್ಸ್ ಬೋಯಿಂಗ್ 757 ವಿಮಾನ ಆಕ್ಲಂಡ್‌ನ ವೆನುಪೈ ವಾಯುನೆಲೆಯಿಂದ ಹೊರಟು ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಟೌನ್ಸ್‌ವಿಲ್‌ನಲ್ಲಿ ತಂಗಿತ್ತು. ಈ ಹಂತದಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿಮಾನ ಮಂದಕ್ಕೆ ಚಲಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News