ಇದು ಸಮಾಜವಾದಿ ಪರಿ'ವಾರ್' : ಪಂಚಾಯತ್ ನಿಂದ ಸಂಸತ್ ವರೆಗಿನ ಸದಸ್ಯರು ಇಲ್ಲಿದ್ದಾರೆ

Update: 2016-10-25 05:24 GMT

ಈಗ ಅಖಿಲೇಶ್ ಪರ ಯಾರು, ಶಿವಪಾಲ್ ಪರ ಯಾರು ?

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸುಮಾರು 50 ವರ್ಷಗಳ ಹಿಂದೆ ಸಂಸದರಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದುಬಂದಿದ್ದರು. ಈ ಐದು ದಶಕಗಳಲ್ಲಿ ಅವರ ಕುಟುಂಬದ 17 ಸದಸ್ಯರು ಕೇಂದ್ರ ಅಥವಾ ರಾಜ್ಯದ ರಾಜಕೀಯದಲ್ಲಿ ಇಳಿದಿದ್ದಾರೆ. ಭಾರತೀಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೊಸ ವಿಷಯವೇನಲ್ಲ. ಆದರೆ ಭಾರತದ ಮಟ್ಟಿಗೆ ಅಂದಾಜಿಸಿದರೂ ಉತ್ತರ ಪ್ರದೇಶದಲ್ಲಿ ಈ ಸಮಾಜವಾದಿ ಪಕ್ಷದ ಕುಂಟುಬ ರಾಜಕಾರಣಕ್ಕೆ ಸರಿಸಾಟಿಯಾಗುವಂತಹ ಇತರ ಯಾವುದೇ ಪರಿವಾರ ಸಿಗುವುದಿಲ್ಲ. ಸ್ವತಃ ಮುಲಾಯಂ ಸಿಂಗ್ ಜೊತೆಗೆ, ಅವರ ಸಹೋದರ, ಸೋದರಳಿಯ, ಸೋದರ ಸೊಸೆ, ಮಗ, ಸೊಸೆ ಮತ್ತು ಮೊಮ್ಮಕ್ಕಳು ಸಕ್ರಿಯ ರಾಜಕಾರಣದಲ್ಲಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ ಅದಕ್ಕೆ ಮೊದಲು ಮೊದಲ ಬಾರಿ ಮುಲಾಯಂ ಕುಟುಂಬದ ಒಡಕು ಬಹಿರಂಗವಾಗಿದೆ. ಮುಲಾಯಂ ಸಿಂಗ್ ಯಾದವ್ ಕುಟುಂಬದ ಒಂದು ಪಕ್ಷ ಅವರ ಮಗ ಅಖಿಲೇಶ್ ಯಾದವ್ ಜೊತೆಗಿದೆ. ಮತ್ತೊಂದು ಪಕ್ಷ ಅವರ ಸಹೋದರ ಮತ್ತು ಪಕ್ಷದ ಪ್ರಾದೇಶಿಕ ಅಧ್ಯಕ್ಷ ಶಿವಗೋಪಾಲ್ ಯಾದವ್ ಜೊತೆಗಿದೆ. ಮುಲಾಯಂ ಸಿಂಗ್ ಅವರ ಈ ರಾಜಕೀಯ ಕುಟುಂಬದಲ್ಲಿ ಯಾರು ಯಾರ ಜೊತೆಗಿದ್ದಾರೆ ಎಂದು ಗಮನಿಸೋಣ.

ಮುಲಾಯಂ ಸಿಂಗ್ ಯಾದವ್, 77

ರಾಜಕೀಯ ವಿಜ್ಞಾನದಲ್ಲಿ ಎಂಎ

ಉತ್ತರಪ್ರದೇಶದ ಅಜಂಗಢ ಸಂಸದ

ಆಸ್ತಿ: 2014ರಲ್ಲಿ ಚುನಾವಣಾ ಆಯೋಗದ ಮುಂದೆ ನೀಡಿದ ವಿವರಗಳ ಪ್ರಕಾರ 15,96,71,543  ರೂಪಾಯಿ (ಪತ್ನಿಯದ್ದೂ ಸೇರಿ)

1967ರಲ್ಲಿ ಇಟವಾದ ಜಸ್ವಂತ್ ನಗರ ಸೀಟಿನಿಂದ ಸೋಷಿಯಲಿಸ್ಟ್ ಪಾರ್ಟಿ ಟಿಕೆಟಿನಿಂದ ವಿಧಾನ ಸಭಾ ಚುನಾವಣೆಯನ್ನು ಗೆದ್ದರು. 1977ರಲ್ಲಿ ಜನತಾ ಪಾರ್ಟಿಯ ಸರಕಾರದಲ್ಲಿ ಕೇಂದ್ರ ಸಹಕಾರ ಸಚಿವರಾದರು. ಅದಕ್ಕೆ ಮೊದಲು ಮೂರು ಬಾರಿ ಸಂಸದರಾಗಿದ್ದರು. 1980ರಲ್ಲಿ ಜನತಾ ಪಾರ್ಟಿಯ ಹಲವು ರಾಜಕಾರಣಿಗಳಂತೆ ಸೋತಾಗ ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯರಾದರು. ನಂತರ 1989-91, 1993-95 ಮತ್ತು 2003-07 ನಡುವೆ ಮೂರು ಬಾರಿ ಮುಖ್ಯಮಂತ್ರಿಯಾದರು. ಈವರೆಗೆ ಎಂಟು ಬಾರಿ ಶಾಸಕರಾದವರು. ಈಗ ಐದನೇ ಬಾರಿ ಸಂಸದರಾಗಿದ್ದಾರೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜನತಾದಳದ ಸರಕಾರದ ನೇತೃತ್ವ ವಹಿಸಿದ್ದರು. 1992ರಲ್ಲಿ ಬೇನಿಪ್ರಸಾದ್ ವರ್ಮಾ ಮತ್ತು ರೇವತಿ ರಮಣ್ ಸಿಂಗ್ ಮೊದಲಾದವರ ಜೊತೆಗೂಡಿ ಸಮಾಜವಾದಿ ಪಾರ್ಟಿ ಸ್ಥಾಪಿಸಿದ್ದರು.

ಅಖಿಲೇಶ್‌ರ ತಂಡ

1. ಅಖಿಲೇಶ್ ಯಾದವ್, 43

ಮುಲಾಯಂ ಸಿಂಗ್ ಯಾದವ್‌ರ ಮೊದಲ ಪತ್ನಿ ದಿವಂಗತ ಮಾಲತೀ ದೇವಿಯ ಮಗ ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ. ಸಿವಿಲ್ ಇಂಜಿಯರ್ ಮತ್ತು ಎಂಎಲ್‌ಸಿ.

ಆಸ್ತಿ: 2012ರಲ್ಲಿ ನೀಡಿದ ವಿವರಗಳ ಪ್ರಕಾರ 7,21,51,310  ರೂಪಾಯಿ (ಪತ್ನಿಯದ್ದೂ ಸೇರಿ)

ಅಖಿಲೇಶ್ ಮೈಸೂರು ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಓದಿದ ನಂತರ ಆಸ್ಟ್ರೇಲಿಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ರಾಜಕೀಯದಲ್ಲಿ 2000ದಿಂದ ಸಕ್ರಿಯರಾಗಿದ್ದಾರೆ. 2000ದಲ್ಲಿ ಕನ್ನೋಜ್ ಸಂಸತ್ ಉಪಚುನಾವಣೆಯಲ್ಲಿ ಮೊದಲ ಬಾರಿ ಗೆದ್ದರು. ಈ ಸ್ಥಾನದಿಂದ 2004 ಮತ್ತು 2009ರಲ್ಲಿ ಮತ್ತೆ ಲೋಕಸಭೆಗೆ ಆರಿಸಿ ಬಂದರು. 2012ರಲ್ಲಿ ಸಮಾಜವಾದಿ ಪಾರ್ಟಿ ಉತ್ತರ ಪ್ರದೇಶದಲ್ಲಿ ಬಹುಮತ ಪಡೆದಾಗ ಅಖಿಲೇಶ್ ಮುಖ್ಯಮಂತ್ರಿಯಾದರು. ಮುಲಾಯಂರ ಸೋದರ ಸಂಬಂಧಿ ರಾಮ್‌ಗೋಪಾಲ ಯಾದವ್ ಅವರು ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗುವುದನ್ನು ಅನುಮೋದಿಸಿದರು. ಆದರೆ ಶಿವಪಾಲ್ ಯಾದವ್ ಈ ನಿರ್ಧಾರವನ್ನು ವಿರೋಧಿಸಿದ್ದರು.

2. ಡಿಂಪಲ್ ಯಾದವ್, 38

ಅಖಿಲೇಶ್ ಯಾದವ್‌ರ ಪತ್ನಿ

ಬಿಕಾಂ

ಸಂಸದೆ, ಕನ್ನೋಜ್

ಆಸ್ತಿ: 2014ರ ಚುನಾವಣೆಯಲ್ಲಿ ನೀಡಿದ ವಿವರಗಳ ಪ್ರಕಾರ 28,05,16,415  ರೂಪಾಯಿ (ಪತಿಯದ್ದೂ ಸೇರಿ) ಸೇನಾಧಿಕಾರಿಯ ಮಗಳಾಗಿರುವ ಡಿಂಪಲ್ ಅವರು 1999ರಲ್ಲಿ ಅಖಿಲೇಶ್‌ರನ್ನು ಮದುವೆಯಾದರು. 2009ರಲ್ಲಿ ಫಿರೋಜಬಾದ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಕಾಂಗ್ರೆಸ್‌ನ ರಾಜ್ ಬಬ್ಬರ್ ಅವರ ಎದುರು ಸೋತರು. ನಂತರ ಅಖಿಲೇಶ್ ಮುಖ್ಯಮಂತ್ರಿಯಾದ ಮೇಲೆ ಕನ್ನೋಜ್ ಲೋಕಸಭಾ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. 2014ರ ಲೋಕಸಭಾ ಚುನಾವಣೆಯಲ್ಲಿಯೂ ಅವರು ಕನ್ನೋಜ್ ಸ್ಥಾನದಿಂದ ಅವರು ಗೆದ್ದರು. ಲಖನೌನಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಹೆಚ್ಚಾಗಿ ಇರುತ್ತಾರೆ. ಯಾವುದೇ ವಿವಾದದಲ್ಲಿ ಅವರ ಹೆಸರು ಬಂದಿಲ್ಲ. ಆದರೆ ಅಕ್ರಮ ಆಸ್ತಿ ಬಗ್ಗೆ ಮುಲಾಯಂ ಕುಟುಂಬದ ಮೇಲೆ ಇರುವ ಆರೋಪದಲ್ಲಿ ಡಿಂಪಲ್ ಹೆಸರೂ ಇತ್ತು. ಆದರೆ ಈಗ ಈ ಪ್ರಕರಣ ಮುಚ್ಚಿ ಹೋಗಿದೆ.

3.ರಾಮ್‌ಗೋಪಾಲ್ ಯಾದವ್, 70

ಮುಲಾಯಂರ ಸೋದರ ಸಂಬಂಧಿ

ಎಸ್‌ಪಿ ಪ್ರಧಾನ ಕಾರ್ಯದರ್ಶಿ

ಪಿಎಚ್‌ಡಿ

ರಾಜ್ಯಸಭಾ ಸಂಸದ

ಆಸ್ತಿ: 2014ರ ಚುನಾವಣೆಯಲ್ಲಿ ಸಲ್ಲಿಸಿದ ವಿವರಗಳ ಅನುಸಾರ ರು. 10,49,03,998

ರಾಂಗೋಪಾಲ್ ಅವರು 1988ರಲ್ಲಿ ಇಟಾವದ ಬಸರೇಹರ್ ಬ್ಲಾಕ್ ಮುಖ್ಯಸ್ಥನಾಗಿ ತಮ್ಮ ರಾಜಕೀಯ ವೃತ್ತಿ ಆರಂಭಿಸಿದ್ದರು. ನಾಲ್ಕು ವರ್ಷಗಳ ಒಳಗೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯರಾದರು. ಈವರೆಗೆ ಕೇವಲ ಒಂದು ಬಾರಿ 2004ರಲ್ಲಿ ಮಾತ್ರ ಲೋಕಸಭಾ ಚುನಾವಣೆ ಗೆದ್ದಿದ್ದಾರೆ. 1996ನಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪಕ್ಷದ ಒಳಗೆ ಪ್ರೊಫೆಸರ್ ಸಾಹೇಬ್ ಎಂದು ಕರೆಸಿಕೊಳ್ಳುವ ರಾಂಗೋಪಾಲ್ ಅವರು ಮುಲಾಯಂರ ಬಹಳ ನಂಬಿಕಸ್ತ ಸಲಹೆಗಾರರು. ರಾಂಗೋಪಾಲ್ ಅವರು ಅಮರ್ ಸಿಂಗ್‌ರನ್ನು ರಾಜ್ಯಸಭೆಗೆ ಕಳುಹಿಸುವುದನ್ನು ವಿರೋಧಿಸಿದ್ದರು. ರಾಂ ಗೋಪಾಲರ ಮೂವರು ಮಕ್ಕಳಲ್ಲಿ ಒಬ್ಬರು ನಿಧನರಾಗಿದ್ದಾರೆ. ಒಬ್ಬ ಮಗಳೂ ಅವರಿಗೆ ಇದ್ದಾರೆ.

4. ಅಕ್ಷತ್ ಯಾದವ್, 29

ರಾಂ ಗೋಪಾಲರ ಸಣ್ಣ ಮಗ

ಬಿಬಿಎಂ

ಫಿರೋಜಬಾದ್ ಸಂಸದ

ಆಸ್ತಿ: 2014ರ ಚುನಾವಣೆಯಲ್ಲಿ ಸಲ್ಲಿಸಿದ ಮಾಹಿತಿ ಪ್ರಕಾರ ರು. 10,08,83,304 (ಪತ್ನಿಯ ಆಸ್ತಿಯೂ ಸೇರಿದೆ.)

2014ರಲ್ಲಿ ಫಿರೋಜಬಾದ್ ಲೋಕಸಭಾ ಸೀಟಿನಿಂದ ಸ್ಪರ್ಧಿಸಲು ಅಕ್ಷತ್‌ರಿಗೆ ಟಿಕೆಟ್ ಸಿಕ್ಕಿದ ಬಗ್ಗೆ ರಾಂಗೋಪಾಲ್ ಮತ್ತು ಶಿವಗೋಪಾಲ್ ನಡುವೆ ಚಕಮಕಿಯಾಗಿದೆ. ಆದರೆ ಅವರು ಪಕ್ಷದ ರಾಜಕೀಯದಲ್ಲಿ ಹೆಚ್ಚು ಮೂಗು ತೂರಿಸುವುದಿಲ್ಲ. ಅಕ್ಷತ್ ಅವರು ಇಟವಾ ಅಥವಾ ಮೈನ್ ಪುರಿಗೆ ಹೋಗುವುದು ಕಡಿಮೆ. ಅವರು ತಮ್ಮ ಹೆಚ್ಚು ಸಮಯವನ್ನು ದಿಲ್ಲಿಯಲ್ಲಿ ಕಳೆಯುತ್ತಾರೆ. ಇತ್ತೀಚೆಗಿನ ವಿವಾದದಲ್ಲಿ ಒಮ್ಮೆ ಮಾತ್ರ ತಮ್ಮ ಸೋದರ ಸಂಬಂಧಿ ಅರವಿಂದ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟಿಸಿದಾಗ ಹೇಳಿಕೆ ನೀಡಿದ್ದರು. ಯಾರದೇ ವಿರುದ್ಧ ಎದ್ದಿರುವ ಆರೋಪಗಳು ಸಾಬೀತಾಗುವ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಅಕ್ಷತ್ ಹೇಳಿದ್ದರು.

5. ಧರ್ಮೇಂದ್ರ ಯಾದವ್, 38

ಮುಲಾಯಂನ ಸಹೋದರ ಅಭಯ್ ರಾಂರ ಮಗ

ರಾಜಕೀಯ ವಿಜ್ಞಾನದಲ್ಲಿ ಎಂಎ

ಬುಡಾನ್ ಸಂಸದ

ಆಸ್ತಿ: 2014ರ ಚುನಾವಣೆಯಲ್ಲಿ ಸಲ್ಲಿಸಿದ ಮಾಹಿತಿ ಪ್ರಕಾರ ರು. 14,99,05,46  (ಪತ್ನಿಯ ಆಸ್ತಿಯೂ ಸೇರಿದೆ.)

ಧಮೇಂದ್ರರ ತಂದೆ ಅಭಯ್ ರಾಮ್ ಎಂದೂ ರಾಜಕೀಯದಲ್ಲಿ ಇರದಿದ್ದರೂ ಎರಡು ಬಾರಿ ಬುಡಾನ್ ಸಂಸದರು. ಸಫೈ ಮಹೋತ್ಸವದ ಪ್ರಮುಖ ಆಯೋಜಕರು. ಅಮರ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ನಂತರ ಅವರು ಈ ಕಾರ್ಯಕ್ರಮವನ್ನು ಮೊದಲಿನಂತೆ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅಧಿಕಾರ ಕಳೆದು ಕೊಂಡಾಗಲೂ ಈ ಕಾರ್ಯಕ್ರಮದ ಮೂಲಕ ತಮ್ಮ ಛಾಪು ಬೀಡಿದ್ದರು. ದಿಲ್ಲಿ ಮತ್ತು ಬುಡಾಣ್‌ನಲ್ಲಿ ಬಹಳಷ್ಟು ಸಮಯ ಕಳೆಯುವ ಧಮೇಂದ್ರ ಸಂಸದರಾಗಿ ನಿಯಮಿತರಾಗಿ ಸಂಸತ್ತಿನಲ್ಲಿ ಹಾಜರಿರುತ್ತಾರೆ. ಸಂಸತ್ತಿನಲ್ಲಿ ಅವರ ಹಾಜರಾತಿ ಶೇ. 94ರಷ್ಟಿರುತ್ತದೆ.

6. ಸಂಧ್ಯಾ ಯಾದವ್, 38

ಮುಲಾಯಂರ ಸೋದರ ಸೊಸೆ

ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಮೈನ್‌ಪುರಿ

ಆಸ್ತಿ: ವಿವರ ಲಭ್ಯವಿಲ್ಲ.

ಧಮೇಂದ್ರರ ಅವಳಿ ಸಹೋದರಿಯಾಗಿರುವ ಸಂಧ್ಯಾರ ಮದುವೆ ಸಮಾಜವಾದಿ ಪಕ್ಷದ ಮಾಜಿ ಶಾಸಕರಾದ ಉರ್ಮಿಲಾ ಯಾದವ್ ಅವರ ಮಗನ ಜೊತೆಗೆ ಆಗಿದೆ. ಅವರು ಇದೇ ವರ್ಷ ರಾಜಕೀಯ ಪ್ರವೇಶಿಸಿದ್ದಾರೆ. ಈಗ ಮನೆಯಿಂದಲೇ ಪಕ್ಷದ ಕಾರ್ಯ ನಿರ್ವಹಿಸುತ್ತಾರೆ.

7. ತೇಜ್ ಪ್ರತಾಪ್ ಯಾದವ್, 27

ಮುಲಾಯಂರ ಸೋದರ ಸಂಬಂಧಿ ಮೊಮ್ಮಗ, ಆರ್‌ಜೆಡಿ ಮುಖ್ಯಸ್ಥ ಲಾಲೂ ಯಾದವ್‌ರ ಅಳಿಯ

ಎಂಬಿಎ

ಮೈನ್‌ಪುರಿ ಸಂಸದ

ಆಸ್ತಿ: 2014ರ ಚುನಾವಣೆಯಲ್ಲಿ ಸಲ್ಲಿಸಿದ ವಿವರಗಳ ಪ್ರಕಾರ ರು. 42,55,56,96

ತೇಜ್ ಪ್ರತಾಪ್ ಅವರು ಆಸ್ಟ್ರೇಲಿಯದ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದಾರೆ. 2014ರಲ್ಲಿ ಮೈನ್‌ಪುರಿ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಅದಕ್ಕೆ ಮೊದಲು ಅಭಯ್ ರಾಂರಿಗೆ ನೆರವಾಗುತ್ತಿದ್ದರು. ಸಂಸದರಾದ ಮೇಲೆ ತೇಜ್ ಪ್ರತಾಪ್ ತಮ್ಮ ಬಹಳಷ್ಟು ಸಮಯವನ್ನು ದೆಹಲಿಯಲ್ಲಿ ಕಳೆಯುತ್ತಾರೆ.

8. ಮೃದುಲಾ ಯಾದವ್

ತೇಜ್ ಪ್ರತಾಪ್‌ರ ತಾಯಿ

ಸಫೈ ಬ್ಲಾಕ್ ಮುಖ್ಯಸ್ಥರು (2015ರಿಂದ)

ಆಸ್ತಿ: ವಿವರ ಲಭ್ಯವಿಲ್ಲ.

ಮೃದುಲಾ ಮತ್ತು ತೇಜ್ ಪ್ರತಾಪ್‌ರ ಸಮಾಜವಾದಿ ಪಕ್ಷದಲ್ಲಿ ಒಂದು ಮುಖ್ಯ ಗುರುತೆಂದರೆ ಅವರು ಸಫೈ ಮಹೋತ್ಸವವು ಮೃದುಲಾರ ಪತಿ ಮತ್ತು ತೇಜ್‌ರ ತಂದೆಯಾಗಿರುವ ರಣ್‌ವೀರ್ ಅವರಿಗೆ ಅರ್ಪಿತ ಕಾರ್ಯಕ್ರಮ. ಮೃದುಲಾ ಯಾದವ್ ಮೊದಲಿಗೆ ಸಫೈನಲ್ಲಿ ತಮ್ಮ ತಂದೆಯ ಮನೆಯಲ್ಲಿರುತ್ತಿದ್ದರು. ಆದರೆ ಮಗ ಸಂಸದರಾದ ಮೇಲೆ ಬಹುತೇಕ ದೆಹಲಿಯಲ್ಲಿರುತ್ತಾರೆ.

9. ಅರವಿಂದ ಸಿಂಗ್

ರಾಂ ಗೋಪಾಲರ ಸೋದರಳಿಯ, ಮೈನ್‌ಪುರಿಯ ಕರ್ಹಲ್‌ನ ಪೂರ್ವ ಬ್ಲಾಕ್ ಮುಖ್ಯಸ್ಥ

ರಾಜಕೀಯ ವಿಜ್ಞಾನದಲ್ಲಿ ಎಂಎ

ಎಂಎಲ್‌ಸಿ

ಆಸ್ತಿ: ವಿವರ ಲಭ್ಯವಿಲ್ಲ.

ರಾಮ್‌ಗೋಪಾಲರ ತಂಗಿಯ ಮಗ. ಎರಡು ತಿಂಗಳ ಮಒದಲು ಎಂಎಲ್‌ಸಿಯಾದರು. ಸಮಾಜವಾದಿ ಪಕ್ಷದ ಪ್ರದೇಶ ಅಧ್ಯಕ್ಷರಾದ ಮೇಲೆ ಶಿವಪಾಲ್ ಅವರ ಮೇಲೆ ಪಕ್ಷದಲ್ಲಿ ಭಿನ್ನಮತವನ್ನು ಪ್ರಚೋದಿಸುವ ಆರೊೀಪ ಹೊರಿಸಿ ಪಕ್ಷದಿಂದ ಉಚ್ಛಾಟಿಸಿದ್ದಾರೆ.ಅರವಿಂದ್ ತಮ್ಮ ಮೇಲೆ ಹೇರಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ.

10. ಬಿಲ್ಲು ಯಾದವ್

ರಾಂಗೋಪಾಲ್‌ರ ಸೋದರಳಿಯ

ಮಾಸ್ಟರ್ಸ್

ಮೈನ್‌ಪುರಿಯ ಕರ್ಹಲ್ ಬ್ಲಾಕ್ ಪ್ರಮುಖರು

ಆಸ್ತಿ: ವಿವರ ಲಭ್ಯವಿಲ್ಲ.

ಅರವಿಂದರ ಸಹೋದರ. ಕಳೆದ ವರ್ಷ ಅವರ ಜಾಗದಲ್ಲಿ ಬ್ಲಾಖ್ ಅಧ್ಯಕ್ಷರಾಗಿದ್ದರು. ಅವರು ಕುಟುಂಬದ ವ್ಯವಹಾರಗಳಲ್ಲಿ ತಮ್ಮ ಸಹೋದರನಿಗೆ ನೆರವು ನೀಡುತ್ತಾರೆ.

ಕೃಪೆ: www.jansatta.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News