×
Ad

ಭಾರತದಲ್ಲಿ ಉದಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ

Update: 2016-10-25 13:50 IST

ಹೊಸದಿಲ್ಲಿ, ಅಕ್ಟೋಬರ್ 25: ಭಾರತದಲ್ಲಿ ಉದಾರ ಮನಸ್ಸಿರುವವರ ಸಂಖ್ಯೆಯಲ್ಲಿ ವೃದ್ಧಿಯಾಗಿದೆ ಎಂದು ವರದಿಯಾಗಿದೆ. ಅಪರಿಚಿತರಿಗೆ ನೆರವಾಗುವ ಸ್ವಯಂಸೇವಾ ಸಂಸ್ಥೆಗಳು, ಸಮಾಜಸೇವಾ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ವರ್ಲ್ಡ್ ಗಿವಿಂಗ್ ಇಂಡೆಕ್ಸ್ ನಲ್ಲಿ ತಿಳಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇತರರಿಗೆ ನೆರವಾಗುವುದರಲ್ಲಿ ಭಾರತೀಯರು ಬಹಳ ಮುಂದಿದ್ದಾರೆ ಎಂದು ವರ್ಲ್ಡ್ ಗಿವಿಂಗ್ ಇಂಡೆಕ್ಸ್ ಹೊರಡಿಸಿದ ಲೆಕ್ಕಗಳು ವಿವರಿಸಿವೆ.

 ಉದಾರಮನಸ್ಸಿರುವವರ ಸಂಖ್ಯೆಯಲ್ಲಿ 2014-ರಲ್ಲಿ ಭಾರತಕ್ಕೆ 106ನೆ ಸ್ಥಾನವಿತ್ತು. 2015ರಲ್ಲಿ 91ಸ್ಥಾನಕ್ಕೆ ತಲುಪಿದೆ ಎಂದು ಗಿವಿಂಗ್ ಇಂಡಕ್ಸ್ ಹೇಳುತ್ತಿದೆ. 2015ರಲ್ಲಿ 40.1 ಕೋಟಿ ಭಾರತೀಯರು ಇತರರಿಗೆ ಯಾವುದಾದರೊಂದು ರೀತಿಯಲ್ಲಿ ಸಹಾಯ ಮಾಡಿದ್ದಾರೆ. 2014ರಲ್ಲಿ ಇದು 33.5 ಕೋಟಿ ಆಗಿತ್ತು. 2015ರಲ್ಲಿ 20ಕೋಟಿ ಭಾರತೀಯರು ಅಪರಿಚಿತರಿಗೆ ಹಣ ಸಯಾಯ ನೀಡಿದ್ದಾರೆ ಮತ್ತು ಅಷ್ಟೇ ಮಂದಿ ಸೇವಾಚಟುವಟಿಕೆಗಳ ಮೂಲಕ ಇತರರಿಗೆ ನೆರವಾಗಿದ್ದಾರೆ.

ತಮಿಳ್ನಾಡಿನ ಪ್ರವಾಹ, ನೇಪಾಲದ ಭೂಕಂಪದಂತಹ ಘಟನೆಗಳಲ್ಲಿ ಮೈಮರೆತು ಭಾರತೀಯರು ಸಹಾಯ ಹಸ್ತವನ್ನುಚಾಚಿದ್ದರೆ. ಇದು ಭಾರತದ ಉದಾರ ಮನಸ್ಸಿನವರ ಸ್ಥಾನವನ್ನು ಮತ್ತಷ್ಟು ಉತ್ತಮ ಪಡಿಸಲು ಸಹಕಾರಿಯಾಗಿದೆ. ಪ್ರತಿಯೊಂದು ರಾಷ್ಟ್ರದ ಜನಂಸಂಖ್ಯೆಯ ಅನುಪಾತದಂತೆ ಗಿವಿಂಗ್ ಇಂಡಕ್ಸ್ ತಯಾರಿಸಲಾಗುತ್ತದೆ. ಆದ್ದರಿಂದ ಈವಿಷಯದಲ್ಲಿ ನಮ್ಮ ನೆರೆಯ ಮ್ಯಾನ್ಮಾರ್ ದೇಶ ತುಂಬಾ ಮುಂದಿದೆ.

 ಉದಾರ ಮನಸ್ಸಿನವರ ವಿಷಯದಲ್ಲಿ ಮ್ಯಾನ್ಮಾರ್ ಜಗತ್ತಿನಲ್ಲಿ ಒಂದನೆ ಸ್ಥಾನದಲ್ಲಿದೆ. ಅಮೆರಿಕ, ಆಸ್ಟ್ರೇಲಿಯ, ನ್ಯೂಝಿಲೆಂಡ್,ಶ್ರೀಲಂಕಾ ನಂತರದ ಸ್ಥಾನಗಳನ್ನು ಗಳಿಸಿವೆ ಎಂದು ಚ್ಯಾರಿಟಿ ಏಯ್ಡಾ ಫೌಂಡೇಶನ್‌ನ ಗಿವಿಂಗ್ ಇಂಡೆಕ್ಸ್ ಬಹಿರಂಗಪಡಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News