’ಹಿಂದುತ್ವ’ 1995ರ ತೀರ್ಪಿನ ಪರಿಶೀಲನೆ ಇಲ್ಲ: ಸುಪ್ರೀಂ ಕೋರ್ಟ್
Update: 2016-10-25 15:08 IST
ಹೊಸದಿಲ್ಲಿ, ಅ.25: ಹಿಂದುತ್ವ ಏನು? ಅಥವಾ ಹಿಂದುತ್ವದ ಅರ್ಥ ಏನು ? ಈ ಬಗ್ಗೆ 1995 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವುದಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ‍್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ 7 ಸದಸ್ಯರ ನ್ಯಾಯಪೀಠ 1995 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಮರುಪರಿಶೀಲನೆ ಇಲ್ಲ ಮತ್ತು ಹಿಂದುತ್ವದ ಬಗ್ಗೆ ಈ ಸಮಯದಲ್ಲಿ ವಿಸ್ತಾರವಾದ ಚರ್ಚೆ ನಡೆಸುವುದಿಲ್ಲ ಸ್ಪಷ್ಟಪಡಿಸಿದೆ.
ಇದೇ ವೇಳೆ ಹಿಂದುತ್ವಕ್ಕೆ ಮರು ವಾಖ್ಯಾನ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.