×
Ad

"ನಮ್ಮ ಪರಿವಾರ ಒಂದಾಗಿದೆ, ಪಕ್ಷದಲ್ಲಿಯೂ ಒಗ್ಗಟ್ಟು ಇದೆ. ” : ಮುಲಾಯಂ ಸಿಂಗ್‌ ಯಾದವ್‌

Update: 2016-10-25 15:49 IST

ಲಕ್ನೋ, ಅ.25: "ನಮ್ಮ ಪರಿವಾರ ಒಂದಾಗಿದೆ, ಪಕ್ಷದಲ್ಲಿಯೂ   ಒಗ್ಗಟ್ಟು ಇದೆ. ”  ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್‌ ಇಂದು ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  " ಅಖಿಲೇಶ್‌ ಯಾದವ್‌ ಮುಖ್ಯ ಮಂತ್ರಿಯಾಗಿ ಮುಂದುವರಿಯಲಿದ್ಧಾರೆ. ಮುಂದಿನ ಚುನಾವಣೆಯ ನಂತರ  ಬಳಿಕ ಮುಖ್ಯ ಮಂತ್ರಿಯ ಆಯ್ಕೆ ಮಾಡಲಾಗುವುದು. ಅಷ್ಟರ ತನಕ ಅಖಿಲೇಶ್ ಯಾದವ್‌ ಮುಖ್ಯ ಮಂತ್ರಿಯಾಗಿರುತ್ತಾರೆ. ಅವರ ಬದಲಾವಣೆ ಇಲ್ಲ” ಎಂದು ಹೇಳಿದರು.
" ನಮ್ಮ ಪಕ್ಷದ ವಿರುದ್ಧ ಕೆಲವರು  ಸಂಚು  ನಡೆಸುತ್ತಿದ್ದಾರೆ.ಪಕ್ಷದ ನೀತಿ ಸಿದ್ಧಾಂತಗಳಿಗೆ ಎಲ್ಲರೂ  ಬದ್ಧರಾಗಿದ್ದಾರೆ . 2012ರಲ್ಲಿ ತಮ್ಮ  ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಹುಮತ ಪಡೆದಿತ್ತು  ಎಂದು ನೆನಪಿಸಿಕೊಂಡರು.
 ಮಾಜಿ ಸಚಿವರುಗಳನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್‌ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮುಲಾಯಂ ಸಿಂಗ್‌ ತಿಳಿಸಿದರು.ಅಮರಸಿಂಗ್‌ ಅವರನ್ನು ಪಕ್ಷದಿಂದ ಹೊರಹಾಕುವುದಿಲ್ಲ. ರಾಮ್‌ಗೋಪಾಲ್‌ ಮಾತಿಗೆ ಯಾವುದೇ ಮಹತ್ವ ಇಲ್ಲ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್‌ ಇರಲಿಲ್ಲ. ಆದರೆ ಮುಲಾಮ್‌ ಸಿಂಗ್‌ ಸಹೋದರ ಮತ್ತು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ  ಶಿವಪಾಲ್ ಸಿಂಗ್‌ ಯಾದವ್ ಉಪಸ್ಥಿತರಿದ್ದರು.. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News