×
Ad

ಮಾದಕ ದ್ರವ್ಯ ಬಳಕೆ ತಡೆಗೆ ಭಾರೀ ಕಾರ್ಯತಂತ್ರ

Update: 2016-10-26 18:25 IST

ಚಂಡಿಗಡ, ಅ.26: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಹಣ, ಮಾದಕದ್ರವ್ಯ ಹಾಗೂ ಮದ್ಯದ ಬಳಕೆಯನ್ನು ತಡೆಯಲು ಭಾರೀ ಕಾರ್ಯತಂತ್ರವನ್ನು ತಯಾರಿಸಲಾಗುವುದೆಂದು ಚುನಾವಣಾ ಆಯೋಗವು ಮಂಗಳವಾರ ಹೇಳಿದೆ. ರಾಜ್ಯದಲ್ಲಿ ಮಾದಕದ್ರವ್ಯ ಪಿಡುಗು ಭಾರೀ ವಿವಾದವಾಗಿರುವ ಹಿನ್ನೆಲೆಯಲ್ಲಿ ಅದರ ಈ ಹೇಳಿಕೆ ಹೊರಟಿದೆ.

ಪಂಜಾಬ್‌ನಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತ ಚುನಾವಣೆ ನಡೆಸಲು ಎಲ್ಲ ಪ್ರಯತ್ನ ನಡೆಸಲಾಗುವುದೆಂದು ಆಯೋಗ ತಿಳಿಸಿದೆ.

ವಿರೋಧ ಪಕ್ಷಗಳು ನೀಡಿರುವ ಸಲಹೆಗಳನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತ ಚುನಾವಣೆ ನಡೆಯುವಂತಾಗಲು ಎಲ್ಲ ಪ್ರಯತ್ನ ಕೈಗೊಳ್ಳುವ ಭರವಸೆಯನ್ನು ತಾವು ನೀಡಿದ್ದೇವೆಂದು ಚಂಡಿಗಡದಲ್ಲಿ ಪತ್ರಿಕಾ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿದ್ದ ಮುಖ್ಯ ಚುನಾವಣಾಯುಕ್ತ ನಝೀಂ ಝೈದಿ ಹೇಳಿದರು.

ತಾವು ಸಂಪೂರ್ಣ ತಟಸ್ಥ ಹಾಗೂ ಪಕ್ಷಪಾತ ರಹಿತ ಚುನಾವಣೆ ನಡೆಸಲು ಬಯಸಿದ್ದೇವೆಂದು ಅವರು ತಿಳಿಸಿದರು.

ಪಂಜಾಬ್ ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿಸಲು ಮಾದಕದ್ರವ್ಯ ಹಾಗೂ ಮದ್ಯದ ಬಳಕೆಯ ಕುರಿತು ಪ್ರತಿಕ್ರಿಯಿಸಿದ ಝೈದಿ, ಅವುಗಳ ಉಪಯೋಗ ತಡೆಯಲು ಪಕಡ್ಬಂದಿ ಕಾರ್ಯವ್ಯೆಹ ರಚಿಸಲಾಗುವುದು ಎಂದರು.

ರಾಜ್ಯದಲ್ಲಿ ಪೊಲೀಸ್ ಹಾಗೂ ನಾಗರಿಕ ಆಡಳಿತವನ್ನು ‘ಸರಿಪಡಿಸಬೇಕೆಂಬ’ ಬೇಡಿಕೆಯನ್ನು ಹಲವು ಪಕ್ಷಗಳು ಮುಂದಿರಿಸಿವೆಯೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News