ನಿವೃತ್ತ ನೌಕರರ ಗುರುತು ಚೀಟಿಯಲ್ಲಿನ್ನು ರಾಷ್ಟ್ರೀಯ ಲಾಂಛನ
Update: 2016-10-27 17:34 IST
ಹೊಸದಿಲ್ಲಿ,ಅ.27: ನಿವೃತ್ತ ಕೇಂದ್ರ ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ಪಿಂಚಣಿದಾರರ ಗುರುತಿನ ಚೀಟಿಗಳಿನ್ನು ಮುಂದೆ ರಾಷ್ಟ್ರೀಯ ಲಾಂಛನವನ್ನು ಹೊಂದಿರಲಿವೆ. ಈ ಸಂಬಂಧ ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವಾಯದ ಪ್ರಸ್ತಾವನೆಗೆ ಗೃಹ ಸಚಿವಾಲಯವು ಹಸಿರು ನಿಶಾನೆಯನ್ನು ತೋರಿಸಿದೆ.
ನಿವೃತ್ತ ನೌಕರರಿಗೆ ನೀಡಲಾಗುವ ಗುರುತಿನ ಚೀಟಿಗಳು ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಅಗತ್ಯವಿಲ್ಲ ಎಂದು ಈ ಹಿಂದೆ ನಿರ್ಧರಿಸಲಾಗಿತ್ತು.
ಆದರೆ ಇದು ಸ್ವಾಯತ್ತ ಸಂಸ್ಥೆಗಳ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ. ಇಂತಹ ಸ್ವಾಯತ್ತ ಸಂಸ್ಥೆಗಳು ಗುರುತಿನ ಚೀಟಿಗಳಲ್ಲಿ ತಮ್ಮ ಸ್ವಂತ ಲಾಂಛನಗಳನ್ನು ಬಳಸಬಹುದು ಎಂದು ಸಿಬ್ಬಂದಿ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.
ದೇಶದಲ್ಲಿಂದು ಸುಮಾರು 50 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳಿದ್ದಾರೆ.