ಮುಂದಿನ ವರ್ಷದ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಗಳ ಹಿಂದೂಡಿಕೆ
Update: 2016-10-27 23:18 IST
ಹೊಸದಿಲ್ಲಿ,ಅ.27: ಐಎಎಸ್,ಐಪಿಎಸ್ ಇತ್ಯಾದಿ ಅಧಿಕಾರಿಗಳ ಆಯ್ಕೆಗಾಗಿ ನಡೆಸಲಾಗುವ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಯು ಮುಂದಿನ ವರ್ಷದ ಆಗಸ್ಟ್ ಬದಲಿಗೆ ಜೂನ್‌ನಲ್ಲಿ ನಡೆಯಲಿದೆ.
ಮೂರು ವರ್ಷಗಳ ಬಳಿಕ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ಆಗಸ್ಟ್ ಬದಲು ಜೂನ್‌ನಲ್ಲಿ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಿದೆ.
ಆಯೋಗದ ಪರೀಕ್ಷಾ ವೇಳಾಪಟ್ಟಿಯಂತೆ 2017ನೇ ಸಾಲಿನ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ಜೂ.18ರಂದು ನಡೆಯಲಿದೆ. ಪರೀಕ್ಷೆಯ ಸಮಗ್ರ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಉದ್ದೇಶದಿಂಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಯುಪಿಎಸ್‌ಸಿ ಅಧಿಕಾರಿಯೋರ್ವರು ತಿಳಿಸಿದರು.