ಅಯ್ ದಿಲ್ ಹೈ ಮುಷ್ಕಿಲ್ ನಲ್ಲಿ ಶಾರುಖ್ ಖಾನ್ !
ಮುಂಬೈ, ಅ.28: ಕರಣ್ ಜೋಹರ್ ನಿರ್ದೇಶನದ ಅಯ್ ದಿಲ್ ಹೈ ಮುಷ್ಕಿಲ್‌ಬಹು ಚರ್ಚಿತ ಚಿತ್ರ. ಶಾರುಖ್ ಖಾನ್ ಕೂಡ ಈ ಚಿತ್ರದಲ್ಲಿನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆಂದು ಹೇಳಲಾಗುತ್ತಿತ್ತಾದರೂ ಈಗ ಅದಕ್ಕೆ ಸಾಕ್ಷ್ಯವೂ ದೊರೆತಿದೆ.
ಶಾರುಖ್ ಖಾನ್ ಅಭಿಮಾನಿಯೊಬ್ಬರು, ಶಾರುಖ್ ಅವರು ಐಶ್ವರ್ಯಾಹಾಗೂ ರಣಬೀರ್ ಕಪೂರ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು ಅದೀಗ ವೈರಲ್ ಆಗಿ ಬಿಟ್ಟಿದೆ.
ಅಯ್ ದಿಲ್ ಹೇ ಮುಷ್ಕಿಲ್ ಚಿತ್ರದ ಟ್ರೈಲರ್ ನಲ್ಲಿ ಕೂಡ ಶಾರುಖ್ ಖಾನ್‌ಕಾಣಿಸುತ್ತಾರೆ. ಆದರೆ ಅಲ್ಲಿ ನಟನ ಮುಖವನ್ನು ತೋರಿಸಲಾಗಿಲ್ಲ. ಒಂದು ದೃಶ್ಯದಲ್ಲಿ ಅವರು ಬೆನ್ನು ಹಾಕಿ ನಿಂತಿರುವುದು ಕಾಣುತ್ತದೆ.
ಸೂಕ್ಷ್ಮವಾಗಿ ಗಮನಿಸಿದರೆ ಟ್ರೈಲರ್ ನಲ್ಲಿ ರಣಬೀರ್ ‘ಆಸಾನ್ ಹೈ ಕ್ಯಾ ? ಐಸೀ ಮೊಹಬ್ಬತ್ ಕನಾರ್ ಜಿಸ್ಕೆ ಬದ್ಲೇ ಮೊಹಬ್ಬತ್ ನ ಮಿಲೇ?’’ ಎಂದುಹೇಳುವಾಗ ಕಾಣಿಸಿಕೊಳ್ಳುತ್ತಿರುವುದು ಶಾರುಖ್. ಚಿತ್ರದಲ್ಲಿ ಐಶ್ವರ್ಯಾ ಅವರ ಮೇಲೆ ಪ್ರೇಮ ಹೊಂದಿರುವ ವ್ಯಕ್ತಿಯಾಗಿ ಶಾರುಖ್ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಹೊರತಾಗಿ ಈ ಚಿತ್ರದಲ್ಲಿ ಆಲಿಯಾ ಭಟ್ ಡೀಜೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಕಥೆಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ರಣಬೀರ್, ಅನುಷ್ಕಾ ಹಾಗೂ ಐಶ್ವರ್ಯಾ ನಡುವಿನ ತ್ರಿಕೋನ ಪ್ರೇಮಕಥೆಯೆಂದು ಹೇಳಲಾಗುತ್ತಿದ್ದರೂ ನಿಖರವಾಗಿ ಚಿತ್ರ ನೋಡಿದ ಮೇಲಷ್ಟೇ ಏನಾದರೂ ಹೇಳಬಹುದಾಗಿದೆ.
ಆದರೆ ಚಿತ್ರದಲ್ಲಿ ಅನುಷ್ಕಾ ತಂದೆ ಪಾತ್ರಧಾರಿ ಕೌಶಲ್ ಕಪೂರ್ಅವರು ಚಿತ್ರಕಥೆಯ ಬಗ್ಗೆ ಸ್ವಲ್ಪ ಮಾಹಿತಿ ಹೊರಗೆಡಹಿದ್ದಾರೆನ್ನಲಾಗಿದೆ. ‘‘ಒಂದು ದೃಶ್ಯದಲ್ಲಿ ರಣಬೀರ್ ಅವರು ಅನುಷ್ಕಾ ಹಾಗೂ ಫಾವದ್ ಅವರ ಮುದುವೆ ಗೊತ್ತುಪಡಿಸಲು ಯತ್ನಿಸುವಾಗ ನಾನು ನನ್ನ ಸಹನೆ ಕಳೆದುಕೊಂಡು ಅವರನ್ನು ಮನೆಯಿಂದ ಹೊರ ಹಾಕುತ್ತೇನೆ. ಆರೆ ರಣಬೀರ್ ಮತ್ತಷ್ಟು ಒತ್ತಾಯಪಡಿಸಿದಾಗ ನಾನು ಮದುವೆಗೆ ಒಪ್ಪುತ್ತೇನೆ ಹಾಗೂ ಆತನ ಕೆನ್ನೆಗೆ ಹೊಡೆಯುತ್ತೇನೆ’’ ಎಂದವರು ವಿವರಿಸಿದ್ದಾರೆ.