ಮಸೂದ್ ಅಝರ್ ಭಯೋತ್ಪಾದಕ: ಮುಶರ್ರಫ್

Update: 2016-10-28 09:31 GMT

ಹೊಸದಿಲ್ಲಿ, ಅ. 28: ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಭಯೋತ್ಪಾಕ ಆಗಿದ್ದಾನೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷರಾದ ಜನರಲ್ ಪರ್ವೇಝ್ ಮುಶರ್ರಫ್ ಹೇಳಿದ್ದಾರೆಂದು ವರದಿಯಾಗಿದೆ. ಹಲವಾರು ಬಾಂಬುಸ್ಫೋಟಗಳಲ್ಲಿ ಅಝರ್‌ನ ಕೈವಾಡ ಇದೆ ಎಂದು ಅವರು ಹೇಳಿದ್ದಾರೆ. ಖಾಸಗಿ ಟೀವಿಚ್ಯಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಶರ್ರಫ್ ಈ ಅಭಿಪ್ರಾಯವನ್ನುಪ್ರಕಟಿಸಿದ್ದಾರೆ.

ಆದರೆ ವಿಶ್ವಸಂಸ್ಥೆಯಲ್ಲಿ ಅಝರ್‌ನನ್ನು ಭಯೋತ್ಪಾದಕನಾಗಿ ಘೋಷಿಸದಂತೆ ತಡೆಯಲು ಚೀನದ ಸಹಕಾರವನ್ನು ಯಾಕೆ ಪಾಕಿಸ್ತಾನ ಪಡೆಯಿತು ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಚೀನ ಅಝರ್ ವಿರುದ್ಧ ಸ್ಪಷ್ಟವಾದ ಸಾಕ್ಷ್ಯಗಳಿಲ್ಲ ಎಂದು ಚೀನ ವಿಶ್ವಸಂಸ್ಥೆಯಲ್ಲಿ ಆತನನ್ನು ಭಯೋತ್ಪಾದಕನೆಂದು ಘೋಷಿಸಿದಂತೆ ತಡೆದಿದೆ.

ಪಾಕ್ ಹೈಕಮೀಶನ್ ಅಧಿಕಾರಿ ದಿಲ್ಲಿಯಲ್ಲಿ ಬಂಧಿಸಿದ ಘಟನೆಯ ಕುರಿತು ಕೇಳಿದ ಪ್ರಶ್ನೆಗೆ ಆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಮುಶರ್ರಫ್ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಅವರ ವಿರುದ್ಧ ಎದ್ದಿರುವ ಆರೋಪ ನಿಜವೆಂದಾದರೆ ಅದನ್ನುಪ್ರೋತ್ಸಾಹಿಸಬೇಕಿಲ್ಲ ಎಂದು ಮಾಜಿ ಪಾಕ್ ಸೈನ್ಯದ ಮುಖ್ಯಸ್ಥರೂ ಆದ ಮುಶರ್ರಫ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News