ಕಾಲ್ ಸೆಂಟರ್ ವಂಚನೆ: ಭಾರತದಲ್ಲಿ 20 ಮಂದಿ ಬಂಧನ
ವಾಷಿಂಗ್ಟನ್,ಅ. 28: ಕಾಲ್‌ಸೆಂಟರ್‌ನಿಂದ ಅಮೆರಿಕದ ಅಧಿಕಾರಿಗಳೆಂದು ಫೋನ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆಯಲ್ಲಿ ಭಾರತದಲ್ಲಿ ಈವರೆಗೆ ಇಪ್ಪತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಭಾರತದ ಐದು ಕಾಲ್ ಸೆಂಟರ್‌ಗಳ ವಿರುದ್ಧ ಅಮೆರಿಕದ ಕಾನೂನು ಸಚಿವಾಲಯ ದೂರು ನೀಡಿದೆ. ಅಮೆರಿಕದ ಪೌರತ್ವ ಇರುವ 15,000ಕ್ಕೂ ಅಧಿಕ ಜನರು 300 ದಶಲಕ್ಷ ಡಾಲರ್ ಹಣ ಈವಂಚನೆಯಿಂದಾಗಿ ಕಳಕೊಂಡಿದ್ದಾರೆಂದು ಹೇಳಲಾಗಿದೆ.
ಅಹ್ಮದಾಬಾದ್ ಕೇಂದ್ರವಾಗಿಟ್ಟು ಐದು ಕಾಲ್ ಸೆಂಟರ್‌ಗಳಿಂದ ವಂಚನೆ ನಡೆಸಲಾಗಿದೆ ಎಂದು ಅಮೆರಿಕದ ತನಿಖಾ ಸಂಸ್ಥೆಗಳು ತಿಳಿಸಿವೆ. ಅಮೆರಿಕದ ತೆರಿಗೆ ಮತ್ತು ವಲಸೆ ವಿಭಾಗದ ಅಧಿಕಾರಿಗಳು ಎಂದು ಸುಳ್ಳು ಹೇಳಿ ಫೋನ್ ಮಾಡಿ ಹಣ ಕಬಳಿಸುವ ಕೆಲಸವನ್ನು ವಂಚಕರು ನಡೆಸಿದ್ದಾರೆ. ಹಣ ಕೊಡದವರ ವಿರುದ್ಧ ಕ್ರಮ ಜರಗಿಸಲಾಗುವುದು ಮತ್ತು ಗಡಿಪಾರು ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಈ ರೀತಿ ನಕಲಿ ಫೋನ್ ಕರೆಗಳ ಜಾಲಕ್ಕೆ ಸಿಕ್ಕಿಬಿದ್ದ ಅಮೆರಿಕನ್ ಅನಿವಾಸಿಗಳು ಹಣಕಳಕೊಂಡವರೆಂದು ವರದಿ ತಿಳಿಸಿದೆ.