ಜಾತಿ ತಾರತಮ್ಯದಿಂದ ಪಾರಾಗಲು ಗುಜರಾತ್ ದಲಿತರಿಂದ ಹೊಸ ಉಪಾಯ

Update: 2016-10-30 02:57 GMT

ಅಹ್ಮದಾಬಾದ್, ಅ.30: ಜಾತಿ ತಾರತಮ್ಯದಿಂದ ಪಾರಾಗಲು ಗುಜರಾತ್ನ ದಲಿತರು ಹೊಸ ಉಪಾಯ ಕಂಡುಕೊಂಡಿದ್ದು, ತಮ್ಮ ಹೆಸರಿನ ಜೊತೆ ಜಾತಿಸೂಚಕ ಸರ್‌ನೇಮ್ ಬದಲಾಗಿ ತಾಯಿ ಹೆಸರನ್ನು ಇನ್ನು ಮುಂದೆ ಬಳಸಲು ನಿರ್ಧರಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಹೆಚ್ಚಿನ ಸಮಾನತೆ ತರುವುದು ಈ ಸೂತ್ರದ ಉದ್ದೇಶವಾಗಿದೆ.

"ಮೆಹ್ಸಾನಾ ಜಿಲ್ಲೆಯ ಗ್ರಾಮ ಆರೋಗ್ಯ ಕೇಂದ್ರವೊಂದರಲ್ಲಿ ಮೊದಲು ರೋಗಿಗಳು ನಮ್ಮ ಜಾತಿ ಕೇಳುತ್ತಾರೆ. ಜಾತಿ ಹೇಳಿದ ತಕ್ಷಣ ಅವರ ಮನೋಪ್ರವೃತ್ತಿಯೇ ಬದಲಾಗುತ್ತದೆ" ಎಂದು ವೈದ್ಯ ತರುಣ್ ಚಂದ್ರಿಕಾಬೆನ್ ಬಾಲದೇವ್‌ಬಾಯ್ (30) ಅಭಿಪ್ರಾಯಪಡುತ್ತಾರೆ.

ಉನಾ ಘಟನೆ ಬಳಿಕ ಈ ಚಳವಳಿ ವೇಗ ಪಡೆದಿದ್ದು, ನಯನಾ ನಂದಾಬೆನ್ ಜ್ಯೋತಿಭಾಯಿ (26) ಎಂಬ ಯುವ ವೈದ್ಯೆ ತಾರತಮ್ಯದಿಂದ ಪಾರಾಗಲು ಈ ಉಪಾಯ ಕಂಡುಕೊಂಡರು. ಇವರು ತಮ್ಮ ಸರ್‌ನೇಮ್ ಸೋಳಂಕಿ ಪದವನ್ನು ಬಿಟ್ಟು ತಾಯಿಯ ಹೆಸರನ್ನು ಸೇರಿಸಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳನ್ನೂ ವ್ಯಾಪಕ ಪ್ರಚಾರ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ 500ಕ್ಕೂ ಹೆಚ್ಚು ಮಂದಿ ಈ ಸಂಪ್ರದಾಯ ಆರಾಂಭಿಸಿದ್ದಾರೆ.

ಸಮಾಜ ಸುಧಾರಕ ಜಯಪ್ರಕಾಶ್ ನಾರಾಯಣ್ ಅವರಂಥ ಹಲವು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಇಂಥ ಚಳವಳಿಗೆ ಸ್ಫೂರ್ತಿ ಎಂದು ಸಮಾಜಶಾಸ್ತ್ರಜ್ಞ ಘನಶ್ಯಾಮ ಶಾ ಹೇಳಿದ್ದಾರೆ. ಅವರ ಅವಧಿಯಲ್ಲಿ ಹಲವು ಮಂದಿ ಸಾಮಾಜಿಕ ಸಮಾನತೆಗಾಗಿ ತಮ್ಮ ಜಾತಿಸೂಚಕ ಸರ್‌ನೇಮ್ ಬಿಟ್ಟಿದ್ದರು ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News