ಕಾರು ಮತ್ತು ಮಣ್ಣೆತ್ತುವ ಯಂತ್ರ ಢಿಕ್ಕಿ, ಮೂವರ ಸಾವು
Update: 2016-11-02 15:44 IST
ಪುತ್ತನತಾನಿ(ಮಲಪ್ಪುರಂ), ನ. 2: ಪುತ್ತನತಾನಿಯಲ್ಲಿ ಕಾರು ಮತ್ತು ಮಣ್ಣೆತ್ತುವ ಯಂತ್ರ ಪರಸ್ಪರ ಢಿಕ್ಕಿಯಾದ ಪರಿಣಾಮ ಮೂವರು ಮೃತರಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಎರಡು ವರ್ಷದ ಹೆಣ್ಣುಮಗು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತರನ್ನು ಚೆನಪ್ಪುರಂ ಚೆರಿಯಪುರತ್ ಹಸನ್ ಮುಸ್ಲಿಯಾರ್(60), ಪತ್ನಿ ಆಯಿಷಾ(55) ಹಾಗೂ ಸೊಸೆ ಫಾತಿಮಾ ಝುಹ್ರಾ(24) ಎಂದು ಗುರುತಿಸಲಾಗಿದೆ.ಫಾತಿಮಾ ಝುಹ್ರಾರ ಮಗು ರಿದಾಫಾತಿಮಾ(2) ಗಂಭೀರಗೊಂಡಿದ್ದು ಮಗು ಆಗಿದ್ದು ಕೊಟ್ಟಕ್ಕಲ್ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಮಂಗಳವಾರ ರಾತ್ರಿ ಎಂಟೂವರೆಗೆ ಪುತ್ತನತಾನಿ ಸಮೀಪದ ಬಾವಪ್ಪಡಿಯಲಿ ಅಪಘಾತ ಸಂಭವಿಸಿದೆ. ಪುತ್ತನತಾನಿಯಿಂದ ತಿರುನಾವಯಿಗೆ ಕಾರಿನಲ್ಲಿ ಕುಟುಂಬ ಹೋಗುತ್ತಿದ್ದಾಗ ಮಣ್ಣೆತ್ತುವ ಯಂತ್ರ ಮತ್ತು ಕಾರು ಢಿಕ್ಕಿಯಾಗಿತ್ತು ಎಂದುವರದಿ ತಿಳಿಸಿದೆ.