ಕೇಳಿದ್ದು ಉಡುಗೊರೆ, ಸಿಕ್ಕಿದ್ದು ವಿವಾಹವಿಚ್ಛೇದನ
ಇಸ್ಲಾಮಾಬಾದ್, ನ. 2: ವಿವಾಹ ವಾರ್ಷಿಕಕ್ಕೆ ತನಗೆ ಸಿಗಬೇಕಾದ ಉಡುಗೊರೆಯನ್ನು ತಾನು ಪತಿಯಲ್ಲಿ ಕೇಳಿದೆ ಆದರೆ ಅವರು ವಿವಾಹ ವಿಚ್ಛೇದನ ಕೊಟ್ಟರು. ಪಾಕಿಸ್ತಾನದ ವಿಷಯದಲ್ಲಿ ಅವರು ಹಾಗೆ ಮಾಡದಿರಲಿ ಎಂದು ನಾವು ಪ್ರಾರ್ಥಿಸೋಣ" ಹೀಗೆ ಪಾಕ್ ಮಾಜಿ ಕ್ರಿಕೆಟ್ ನಾಯಕ ಪಾಕಿಸ್ತಾನದ ಬಲಿಷ್ಠ ರಾಜಕಾರಣಿ ಇಮ್ರಾನ್ ಖಾನ್ ಅವರ ವಿಚ್ಛೇದಿತ ಪತ್ನಿ ರೆಹಾನ್ ಹೇಳಿದ್ದಾರೆಂದು ವರದಿಯಾಗಿದೆ.
ಹತ್ತುತಿಂಗಳ ಇಮ್ರಾನ್‌ರೊಂದಿಗಿನ ತನ್ನ ದಾಂಪತ್ಯ ಸಂಬಂಧವನ್ನು ಕಳೆದ ಅಕ್ಟೋಬರ್ 30ಕ್ಕೆ ದೃಶ್ಯಮಾಧ್ಯಮ ನಿರೂಪಕಿ ಆಗಿರುವ ರೆಹಾನ್ ಕಡಿದುಕೊಂಡಿದ್ದಾರೆ. ಇಮ್ರಾನ್‌ಖಾನ್ ತನ್ನ ಮೊದಲ ಪತ್ನಿ ಗೋಲ್ಡ್ ಸ್ಮಿತ್‌ನೊಂದಿಗೆ ಒಂಬತ್ತು ವರ್ಷದ ವೈವಾಹಿಕ ಸಂಬಂಧವನ್ನು 2004ರ ಜೂನ್‌ನಲ್ಲಿ ವಿಚ್ಛೇದನ ನೀಡುವ ಮೂಲಕ ಕೊನೆಗೊಳಿಸಿದ್ದರು. ಮೊದಲ ಮದುವೆಯಲ್ಲಿ ಇಮ್ರಾನ್‌ರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಪರಸ್ಪರ ಒಪ್ಪಿಗೆಯಿಂದಲೇ ಇಬ್ಬರು ಬೇರ್ಪಟ್ಟಿದ್ದರೂ ಇಮ್ರಾನ್‌ರ ರಾಜಕೀಯ ವಿಷಯಗಳಲ್ಲಿ ರೆಹಾನ್ ಅನಗತ್ಯ ಮೂಗು ತೂರಿಸಿದ್ದು ವಿವಾಹವಿಚ್ಛೇದನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇಮ್ರಾನ್ ಪಾಕಿಸ್ತಾನದಲ್ಲಿ ಉಕ್ಕಿನ ಮನುಷ್ಯ ಎಂದೇ ಗುರುತಿಸಿಕೊಳ್ಳುತ್ತಾರೆ. ಆದರೆ ಅವರನ್ನು ವಿವಾಹವಾಗಿಯೂ ಅಪಮಾನದಿಂದ ತನ್ನನ್ನು ಇಮ್ರಾನ್‌ರಿಂದ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರೆಹಾನ್ ಹೇಳಿದ್ದಾರೆಂದು ವರದಿ ತಿಳಿಸಿದ್ದಾರೆ.