ಪಾಕ್ ದಾಳಿಗಳಿಂದಾಗಿ ಗಡಿಯಲ್ಲಿನ 200ಕ್ಕೂ ಅಧಿಕ ಶಾಲೆಗಳು ಬಂದ್

Update: 2016-11-02 10:29 GMT

ಜಮ್ಮು,ನ.2: ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಸೈನಿಕರ ಭಾರೀ ಗುಂಡಿನ ದಾಳಿಗಳ ಹಿನ್ನೆಲೆಯಲ್ಲಿ ಗಡಿಯಲ್ಲಿನ 200ಕ್ಕೂ ಅಧಿಕ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ಜಮ್ಮುವಿನ 174 ಮತ್ತು ಸಾಂಬಾ ಜಿಲ್ಲೆಯಲ್ಲಿನ 45 ಶಾಲೆಗಳು ಮುಂದಿನ ಆದೇಶದವರೆಗೂ ಮುಚ್ಚಿರುತ್ತವೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಈ ಆದೇಶ ಸರಕರಿ ಶಾಲೆಗಳೊಂದಿಗೆ ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ.

ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಅಶಾಂತಿ ಸ್ಫೋಟಗೊಂಡಿರುವ ಕಾಶ್ಮೀರ ಕಣಿವೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದಲೂ ಶಾಲೆಕಾಲೇಜುಗಳು ಬಾಗಿಲೆಳೆದುಕೊಂಡಿವೆ. ದುಷ್ಕರ್ಮಿಗಳು ಕನಿಷ್ಠ 27 ಶಾಲೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿನ ಪ್ರಕ್ಷುಬ್ಧತೆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕಂಟಕಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News