×
Ad

ಕೇರಳದಲ್ಲಿ ಸಣ್ಣ ವಾಹನಗಳಿಗೂ ವೇಗ ನಿಯಂತ್ರಕ ಕಡ್ಡಾಯ

Update: 2016-11-02 16:01 IST

ಆಲಪ್ಪುಝ,ನ. 2: ಸಣ್ಣವಾಹನಗಳಿಗೂ ವೇಗನಿಯಂತ್ರಕ ಅಳವಡಿಸಲು ಕೇಂದ್ರಸರಕಾರದ ನಿರ್ದೇಶವಿದ್ದು, ಮಂಗಳವಾರದಿಂದ ಕೇರಳದಲ್ಲಿ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿ ಮೋಟಾರು ವಾಹನ ಇಲಾಖೆ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಕೋರ್ಟು ಅದಕ್ಕೆ ತಡೆವಿಧಿಸಿತ್ತು. ಕೋರ್ಟಿನ ಸ್ಟೇ ಕಾಲಾವಧಿಕೊನೆಗೊಂಡಿದ್ದು ಈ ಕಾನೂನನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ಹತ್ತು ಸೀಟಿಗಿಂತ ಹೆಚ್ಚಿರುವ ಪ್ಯಾಸೆಂಜರ್ ವಾಹನಗಳಿಗೆ 3,500 ಕಿಲೊಗಿಂತ ಹೆಚ್ಚು ಸಾಮರ್ಥ್ಯದ ಸರಕುವಾಹನಗಳಿಗೆ ಇನ್ನುಮುಂದೆ ವೇಗನಿಯಂತ್ರಕ ಅಳವಡಿಸಿರಬೇಕು.

 ವೇಗ ನಿಯಂತ್ರಕ ಅಳವಡಿಸದಿದ್ದರೆ ಇನ್ನುಮುಂದೆ ಈ ವಾಹನಗಳಿಗೆ ರಿಜಿಸ್ಟ್ರೇಶನ್ ಅಥವಾ ಫಿಟ್‌ನೆಸ್ ಸರ್ಟಿಫಿಕೆಟ್ ನೀಡಲಾಗುವುದಿಲ್ಲ. ಶಾಲಾಬಸ್‌ಗಳು, ಟಿಪ್ಪರ್‌ಗಳ ಸಹಿತ ದೊಡ್ಡ ವಾಹನಗಳಿಗೆ ಈ ಹಿಂದೆಯೇ ವೇಗ ನಿಯಂತ್ರಕ ಕಡ್ಡಾಯಗೊಳಿಸಲಾಗಿದೆ. 2016 ಎಪ್ರಿಲ್ ಒಂದರಿಂದ ಕಾನೂನು ಜಾರಿಗೊಳಿಸಬೇಕೆಂದು ಕೇಂದ್ರಸರಕಾರ ಸೂಚಿಸಿತ್ತು. ಅದರೆ ಕೋರ್ಟಿನ ಸ್ಟೇ ಇದ್ದುದರಿಂದ ಮೋಟಾರು ವಾಹನ ಇಲಾಖೆಗೆ ಕಾನೂನು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News