×
Ad

ಮೃತ ಮಾಜಿಯೋಧನ ಪುತ್ರರನ್ನು ಥಳಿಸಿದ ಪೊಲೀಸರು

Update: 2016-11-02 18:45 IST


ಹೊಸದಿಲ್ಲಿ,ನ.2: ತನ್ನನ್ನು ಮತ್ತು ತನ್ನ ಕುಟುಂಬ ಸದಸ್ಯರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಮುನ್ನ ಪೊಲೀಸರು ತಮ್ಮನ್ನು ಥಳಿಸಿದ್ದರು ಎಂದು ‘ಸಮಾನ ದರ್ಜೆ ಸಮಾನ ಪಿಂಚಣಿ(ಒಆರ್‌ಒಪಿ)’ ಯೋಜನೆಯ ಅನುಷ್ಠಾನದಲ್ಲಿ ಸರಕಾರದ ವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವ ಮಾಜಿ ಯೋಧ ರಾಮಕಿಶನ್ ಗ್ರೆವಾಲ್ ಅವರ ಪುತ್ರ ಜಸ್ವಂತ್ ಆರೋಪಿಸಿದ್ದಾರೆ.


 ನಗರದ ಹೃದಯಭಾಗದಲ್ಲಿರುವ ಪೊಲೀಸ್ ಠಾಣೆಯೊಂದರಲ್ಲಿ ಜಸ್ವಂತ್,ಅವರ ಕಿರಿಯ ಸೋದರ ಮತ್ತು ಭಾವನನ್ನು ಕೂಡಿಹಾಕಲಾಗಿತ್ತು. ‘‘ಅವರು(ಪೊಲೀಸರು) ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರು. ನಮ್ಮನ್ನು ಅವಾಚ್ಯವಾಗಿ ನಿಂದಿಸಿ ಥಳಿಸಿದರು. ನಮಗೆ ನ್ಯಾಯ ಬೇಕು’’ ಎಂದು ಜಸ್ವಂತ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಯೋಧರ ಕುಟುಂಬಗಳೊಂದಿಗೆ ಪೊಲೀಸರು ಹೀಗೆ ವರ್ತಿಸುವುದನ್ನು ಈ ಹಿಂದೆ ಎಂದೂ ಕೇಳಿರಲಿಲ್ಲ ಎಂದು ತಂದೆಯ ನಿಧನದಿಂದ ಶೋಕತಪ್ತರಾಗಿರುವ ಅವರು ನೋವು ವ್ಯಕ್ತಪಡಿಸಿದರು.


ಗ್ರೆವಾಲ್(70) ಇಲ್ಲಿಯ ಪಾರ್ಕೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಲೆಂದು ಇಲ್ಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ್ದ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಪೊಲೀಸರು ನಿರ್ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News