ದಿಲ್ಲಿ ಪೊಲೀಸರ ಕ್ರಮಕ್ಕೆ ರಾಜನಾಥ್ ಸಮರ್ಥನೆ
Update: 2016-11-02 23:56 IST
ಹೊಸದಿಲ್ಲಿ, ನ.2: ಸಮಾನ ಹುದ್ದೆ ಸಮಾನ ಪಿಂಚಣಿಯ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿರುವ ಭೂಸೇನೆಯ ನಿವೃತ್ತ ಯೋಧನೊಬ್ಬನ ಬಂಧುಗಳನ್ನು ಭೇಟಿ ಮಾಡಲು ಯತ್ನಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಇಲ್ಲಿನ ಆಸ್ಪತ್ರೆಯೊಂದರಲ್ಲಿ ವಶಪಡಿಕೊಂಡಿರುವ ದಿಲ್ಲಿ ಪೊಲೀಸರ ಕ್ರಮವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಸಮರ್ಥಿಸಿಕೊಂಡಿದ್ದಾರೆ.
ಅಪಾಯ ತಗ್ಗಿಸಲು ಏನೆಲ್ಲ ಮಾಡಬೇಕೋ ಅದನ್ನು ದಿಲ್ಲಿ ಪೊಲೀಸರು ಮಾಡುತ್ತಾರೆಂದು ಅವರು ಈ ಸಂಬಂಧದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಮಾಜಿ ಯೋಧ ರಾಮ್‌ಕಿಶನ್ ಗ್ರೆವಾಲ್‌ನ ಕುಟುಂಬಿಕರನ್ನು ವಶಪಡಿಸಿಕೊಂಡ ಬಗ್ಗೆ ಪೊಲೀಸರ ವಿರುದ್ಧ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ ಘಟನೆಯನ್ನು ಕಡೆಗಣಿಸಿದ ರಾಜನಾಥ್, ಬಹುಕಾಲದಿಂದ ಬಾಕಿಯುಳಿದಿದ್ದ ಸಮಾನ ಹುದ್ದೆ ಸಮಾನ ಸಮಸ್ಯೆಯನ್ನು ಎನ್‌ಡಿಎ ಸರಕಾರ ಜಾರಿಗೊಳಿಸುವ ಮೂಲಕ ಬಗೆಹರಿಸಿದೆ ಎಂದಿದ್ದಾರೆ.