ರಜನಿಕಾಂತ್, ಸಲ್ಮಾನ್‌ರನ್ನು ಮೀರಿಸಿದ ಮೋಹನ್ ಲಾಲ್

Update: 2016-11-03 06:18 GMT

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಇತಿಹಾಸ ರಚಿಸಿದ್ದಾರೆ. ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಈ ನಟ 60 ದಿನಗಳ ಒಳಗೆ ಮೂರು ಸಾರ್ವಕಾಲಿಕ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ. ಅವರ ಹಿಂದಿನ ರಿಲೀಸ್‌ಗಳಾದ ಜನತಾ ಗ್ಯಾರೇಜ್, ಒಪ್ಪಂ ಮತ್ತುಪುಲಿಮುರುಗನ್ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ.

ಜನತಾ ಗ್ಯಾರೇಜ್

ಮೋಹನ್‌ಲಾಲ್ ಅವರ ತೆಲುಗು ಸಿನೆಮಾ ಜನತಾ ಗ್ಯಾರೇಜ್ ಸೆಪ್ಟಂಬರ್ 1ಕ್ಕೆ ಬಿಡುಗಡೆಯಾಗಿತ್ತು. ಈ ಸಿನೆಮಾದಲ್ಲಿ ಮೋಹನ್‌ಲಾಲ್ ಗ್ಯಾರೇಜ್ ಮಾಲೀಕರ ಪಾತ್ರವಹಿಸಿದ್ದಾರೆ. ಕೊರಟಲ ಸಿವ ಸಿನೆಮಾದ ನಿರ್ದೇಶಕರು. ಜ್ಯೂನಿಯರ್ ಎನ್‌ಟಿಆರ್ ಮತ್ತು ಉನ್ನಿ ಮುಕುಂದನ್ ನಟಿಸಿದ್ದಾರೆ. ಈ ಸಿನೆಮಾ ಈವರೆಗೆ ರು. 135 ಕೋಟಿ ಸಂಗ್ರಹಿಸಿ ತೆಲುಗು ಬಾಕ್ಸ್ ಆಫೀಸ್‌ನ ಸಾರ್ವಕಾಲಿಕ ಹಿಟ್ ಸಿನಿಮಾ ಎನಿಸಿದೆ.

ಒಪ್ಪಂ

 ಮೋಹನ್‌ಲಾಲ್ ಅವರ ಈ ವರ್ಷದ ಮೊದಲ ಮಲಾಯಳಂ ಸಿನೆಮಾ ಒಪ್ಪಂ ಜನತಾ ಗ್ಯಾರೇಜ್ ನಂತರ ಸೆಪ್ಟಂಬರ್ 8ರಂದು ಬಿಡುಗಡೆಯಾಗಿದೆ. ಪ್ರಿಯದರ್ಶನ್ ನಿರ್ದೇಶನದ ಸಿನೆಮಾ ಕೇರಳದಲ್ಲಿ ಸೂಪರ್ ಹಿಟ್ ಆಗಿದೆ. ಕೆಲವೇ ದಿನಗಳಲ್ಲಿ ಈ ಸಿನೆಮಾ ಸಾರ್ವಕಾಲಿಕ ಉತ್ತಮ ಕಲೆಕ್ಷನ್ ದಾಖಲಿಸಿ ಕೇರಳದಲ್ಲಿ ವರ್ಷದ ಮೂರನೇ ಅತೀ ಹೆಚ್ಚು ಲಾಭ ಗಳಿಸಿದ ಸಿನಿಮಾ ಎನಿಸಿದೆ. ಕೇರಳದಲ್ಲಿ ಈ ಸಿನಿಮಾ ರು. 58 ಕೋಟಿ ಲಾಭ ಮಾಡಿದೆ. ಈ ಸಿನೆಮಾದಲ್ಲಿ ಮೋಹನ್‌ಲಾಲ್ ಮತ್ತು ಪ್ರಿಯದರ್ಶನ್ 22ನೇ ಬಾರಿ ಜೊತೆಯಾಗಿ ಕೆಲಸ ಮಾಡಿದ್ದಾರೆ.

ಪುಲಿಮುರುಗನ್

ಈ ಸಿನೆಮಾ ಅಕ್ಟೋಬರ್ 7ರಂದು ಬಿಡುಗಡೆಯಾಗಿದೆ. ವ್ಯಾಸಖ್ ನಿರ್ದೇಶನದ ಸಿನೆಮಾದಲ್ಲಿ ಮೋಹನ್‌ಲಾಲ್ ಬೇಟೆಗಾರನ ಪಾತ್ರ ನಿರ್ವಹಿಸಿದ್ದಾರೆ. ಬಿಡುಗಡೆಯಾದ ಐದೇ ದಿನಗಳಲ್ಲಿ ಈ ಸಿನೆಮಾ ರು. 20 ಕೋಟಿ ಸಂಗ್ರಹಿಸಿದೆ. ಕೇರಳ ಬಾಕ್ಸ್ ಆಫೀಸ್‌ನಲ್ಲಿ ಈ ಮೊತ್ತವನ್ನು ಅತೀ ವೇಗದಲ್ಲಿ ಪಡೆದ ಸಿನೆಮಾ ಎನಿಸಿದೆ. ಮೊದಲ ವಾರದಲ್ಲಿ ಪುಲಿಮುರುಗನ್ ಎಲ್ಲಾ ಮಲಯಾಳಂ ಸಿನೆಮಾಗಳ ಸಾರ್ವಕಾಲಿಕ ಗಳಿಕೆಯ ದಾಖಲೆ ಮುರಿದಿದೆ. ರಜನೀಕಾಂತ್‌ರ ಕಬಾಲಿ, ವಿಜಯ್‌ರ ತೆರಿ ಮತ್ತು ವಿಕ್ರಂರ 1 ದಾಖಲೆಯನ್ನೂ ಮುರಿದಿದೆ.

ಅಕ್ಟೋಬರ್ 23ರಂದು 17ನೇ ದಿನಕ್ಕೆ ಪುಲಿಮುರುಗನ್ ರು. 42.50 ಕೋಟಿ ಗಳಿಸಿ ದೃಶ್ಯಂ 100 ದಿನ ಮಾಡಿದ ಗಳಿಕೆಯ ದಾಖಲೆ ಮುರಿದು ಸಾರ್ವಕಾಲಿಕ ಹಿಟ್ ಸಿನೆಮಾ ಎನಿಸಿದೆ. ಪುಲಿಮುರುಗನ್‌ನ ಜಾಗತಿಕ ಗಳಿಕೆ ರು. 75 ಕೋಟಿ. 500 ಸಿನೆಮಾ ಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದರೂ ಈ ದಾಖಲೆ ಮಾಡಿದೆ.

ಈ ಮೂರು ಬ್ಲಾಕ್‌ಬಸ್ಟರ್‌ಗಳನ್ನು ಕೊಡಲು ಈ 56 ವರ್ಷದ ನಟ ಕೇವಲ 60 ದಿನಗಳನ್ನಷ್ಟೇ ತೆಗೆದುಕೊಂಡಿದ್ದಾರೆ. ಈ ಒಂದು ದಾಖಲೆಯನ್ನು ಭಾರತೀಯ ಸಿನೆಮಾಗಳ ಯಾವುದೇ ನಟನೂ ಈವರೆಗೂ ಮಾಡಿಲ್ಲ.

ಕೃಪೆ:catchnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News