ಬ್ರಿಟಿಷ್ ಪ್ರಧಾನಿ ಕ್ಷಮೆ ಕೇಳಬೇಕು: ಶಶಿ ತರೂರ್

Update: 2016-11-03 07:49 GMT

ಹೊಸದಿಲ್ಲಿ,ನ. 3: ಜಲಿಯನ್‌ವಾಲ ಬಾಗ್ ಸಾಮೂಹಿಕ ಹತ್ಯೆ ನಡೆಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಬ್ರಿಟಿಷ್ ಪ್ರಧಾನಿ ಮೊಣಕಾಲೂರಿ ಕ್ಷಮೆ ಯಾಚಿಸಬೇಕೆಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ವ್ಯಕ್ತಪಡಿಸಿರುವ ಅಭಿಪ್ರಾಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ವರದಿಯಾಗಿದೆ. ಅದರ ಬೆನ್ನಿಗೆ ತನ್ನ ಹೊಸ ಪುಸ್ತಕದಲ್ಲಿಯೂ ತರೂರ್ ಇದೇ ಅಭಿಪ್ರಾಯವನ್ನು ಸೇರಿಸಿದ್ದಾರೆ ಎನ್ನಲಾಗಿದೆ. ಜಲಿಯಾನ್‌ವಾಲಬಾಗ್ ದುರಂತದ ನೂರನೆ ವರ್ಷದಲ್ಲಾದರೂ ಸಾಧ್ಯವಾದ ಪ್ರಾಯಶ್ಚಿತ್ತವನ್ನು ವಸಾಹತುಶಾಹಿ ನಡೆಸಿರುವವರು ಪ್ರಕಟಿಸಬೇಕಾಗಿದೆ. ಇದು ಅದಕ್ಕಿರುವ ಪರಿಹಾರವಾಗಿದೆ. ಕಳೆದ ವರ್ಷ ಆಕ್ಸ್‌ಫರ್ಡ್‌ನಲ್ಲಿ ಉಪನ್ಯಾಸ ನೀಡಿದಾಗ ಶಶಿ ತರೂರು ಈ ಹೇಳಿಕೆ ನೀಡಿದ್ದರು.

ತರೂರ್ ಮಾತನ್ನು ಒಪ್ಪಿರುವ ಪ್ರಧಾನಿ ನರೇಂದ್ರ ಮೋದಿ ಉಚಿತವಾದ ವಿಷಯ ಇದು. ಸೂಕ್ತವೇದಿಕೆಯಲ್ಲಿ ಎಂದು ಅಂದು ಪ್ರತಿಕ್ರಿಯೆ ನೀಡಿದ್ದರು.

ಆನ್ ಇರ ಆಫ್ ಡಾರ್ಕ್‌ನೆಸ್:ದ ಬ್ರಿಟಿಷ್ ಎಂಪರರ್ ಇನ್ ಇಂಡಿಯ'ಎಂಬ ತನ್ನ ಹೊಸ ಪುಸ್ತಕದಲ್ಲಿ ತರೂರ್ ಸಾಮ್ರಾಜ್ಯಶಾಹಿ ಪ್ರವರ್ಧಮಾನ ಕಾಲ ಭಾರತವನ್ನು ಹೇಗೆ ನಾಶದೆಡೆಗೆ ಒಯ್ಯಿತು ಎಂದು ಚರ್ಚಿಸಿದ್ದಾರೆ ಎನ್ನಲಾಗಿದೆ.

ಇತಿಹಾಸದಲ್ಲಿ ಪೂರ್ವಜರಿಂದಾದ ತಪ್ಪಿಗೆ ನಷ್ಟ ಪರಿಹಾರ ನೀಡುವುದಕ್ಕಿಂತಲೂ ಕ್ಷಮೆ ಯಾಚಿಸುವುದು ಮುಖ್ಯವಾಗಿದೆ ಎಂದು ತರೂರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 ನಾಝಿಗಳು ನಡೆಸಿದ ಕ್ರೌರ್ಯಕ್ಕೆ ಜರ್ಮನ್ ಸೋಶಿಯಲ್ ಡೆಮಕ್ರಾಟಿಕ್ ನಾಯಕ ವಿಲ್ಲಿ ಬ್ರಾಂಡ್ ವಾರ್ಸಾದ ಗೇಟೊದಲ್ಲಿ ಮೊಣಕಾಲೂರಿ ತಪ್ಪನ್ನು ಒಪ್ಪಿಕೊಂಡಿದ್ದರು. ಇತ್ತೀಚೆಗೆ ಕೆನಡದ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೊಕೊಮಗಾಟ್ಟ ಮಾರು ದುರ್ಘಟನೆಗೆ ಕ್ಷಮೆ ಯಾಚಿಸಿದ್ದರು.

1919 ಎಪ್ರಿಲ್ 13ಕ್ಕೆ ಜಲಿಯನ್‌ವಾಲ ಬಾಗ್‌ನಲ್ಲಿ ಸೇರಿದ್ದ ಇಪ್ಪತ್ತುಸಾವಿರದಷ್ಟಿದ್ದ ಜನರ ಮೇಲೆ ಬ್ರಿಗೇಡಿಯರ್ ಜನರಲ್ ಆರ್‌ಇ ಎಚ್ ಡಯರ್ ಗೋಲಿಬಾರ್‌ಗೆ ಆದೇಶ ನೀಡಿದ್ದನು.

ಮಕ್ಕಳು,ಮಹಿಳೆಯರ ಸಹಿತ ಸಾವಿರಾರು ಮಂದಿ ಕೊಲ್ಲಲ್ಪಟ್ಟಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News