ಕೊಲ್ಲಂನಲ್ಲಿ 18ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ
ಪಾಲಕ್ಕಾಡ್/ಕೊಲ್ಲಂ,ನ. 3: ಹದಿನೆಂಟು ವರ್ಷದ ಯುವತಿಯನ್ನು ಕೊಲ್ಲಂನಲ್ಲಿ ಸಾಮೂಹಿಕ ಅತ್ಯಾಚಾರಗೈಯ್ಯಲಾಗಿದೆ ಎಂದು ದೂರು ನೀಡಲಾಗಿದೆ. ಪಾಲಕ್ಕಾಡ್ ಎಂಬಲ್ಲಿನ ಯುವತಿ ಪ್ರಿಯಕರ ಸಹಿತ ಐದು ಮಂದಿ ಸೇರಿ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆಂದು ದೂರು ನೀಡಿದ್ದಾಳೆ ಎಂದು ವೆಬ್‌ಪೋರ್ಟಲೊಂದು ತಿಳಿಸಿದೆ. ಕಳೆದ ಶುಕ್ರವಾರ ಈ ಘಟನೆ ಸಂಭವಿಸಿತ್ತೆಂದು ಪೊಲೀಸರು ಹೇಳಿದ್ದಾರೆ. ಪ್ರಿಯಕರನೆ ಯುವತಿಯನ್ನು ಇತರರು ಅತ್ಯಾಚಾರ ನಡೆಸುವಂತೆ ಮಾಡಿದ್ದಾನೆ ಮತ್ತು ಘಟನೆಯ ವೀಡಿಯೊ ಚಿತ್ರೀಕರಿಸಿ ಯುವತಿಗೆ ಬೆದರಿಕೊಡ್ಡಿದ್ದಾನೆಂದು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಯುವತಿ ನಾಪತ್ತೆಯಾಗಿದ್ದಾಳೆಂದು ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ್ದ ತನಿಖೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಮಾಹಿತಿ ಬಹಿರಂಗವಾಗಿದೆ. ನೆರೆಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಈತನ ಕೋರಿಕೆಯಂತೆ ಕೊಲ್ಲಂಗೆ ಬಂದಿದ್ದಳು. ಚಿನ್ನ ಅಡವಿಟ್ಟು ಪ್ರಿಯಕರನಿಗೆ ಅವಳು ನೀಡಿದ್ದು, ಅದನ್ನು ಮರಳಿ ಕೊಡುವಂತೆ ಯುವತಿ ಒತ್ತಾಯಿಸಿದಾಗ ಇದರ ಕೋಪದಲ್ಲಿ ಯುವತಿಯನ್ನು ಕರೆಯಿಸಿಕೊಂಡು ಇತರರು ಅತ್ಯಾಚಾರ ನಡೆಸುವಂತೆ ಮಾಡಿ ತನ್ನ ದ್ವೇಷವನ್ನು ಆತ ತೀರಿಸಿಕೊಂಡ ಎಂದು ಪೊಲೀಸರುತಿಳಿಸಿದ್ದಾರೆ.
ಪ್ರಿಯಕರ ಹೇಳಿದ ಪ್ರಕಾರವೇ ಯುವತಿ ಕೊಲ್ಲಂಗೆ ಹೋಗಿದ್ದು, ಆದರೆ ಪ್ರಿಯಕರ ಅಲ್ಲಿರಲಿಲ್ಲ. ಎರಡು ದಿವಸ ಕೊಲ್ಲಂನಲ್ಲಿಯೇ ಆಕೆ ಅವನನ್ನು ಕಾದು ಉಳಿದುಕೊಂಡಿದ್ದಾಳೆ.. ನಂತರ ಪ್ರಿಯಕರ ಗೆಳೆಯ ಆಕೆಯನ್ನು ಕರೆದುಕೊಂಡು ಹೋಗಿದ್ದ. ಆಟೋದಲ್ಲಿ ಕರೆದುಕೊಂಡು ಹೋಗಿದ್ದ ಈತ ನಿರ್ಜನ ಪ್ರದೇಶವೊಂದಕ್ಕೆ ಕರೆತಂದಿದ್ದ. ನಂತರ ಅಲ್ಲಿಗೆ ಯುವತಿಯ ಪ್ರಿಯಕರನೂ ಬಂದಿದ್ದಾನೆ. ನಂತರ ಅಲ್ಲಿ ಎಲ್ಲರೂ ಸೇರಿ ಯುವತಿಯನ್ನು ಸಾಮೂಹಿಕವಾಗಿ ಮಾನಭಂಗ ನಡೆಸಿದ್ದಾರೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಯುವತಿ ನಾಪತ್ತೆಯಾಗಿದ್ದಾಳೆಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಡಿದಾಗ ಯುವತಿ ಕೊಲ್ಲಂನಲ್ಲಿ ಪತ್ತೆಯಾಗಿದ್ದಳು. ಕೊಲ್ಲಂನಿಂದ ಕೆಲವು ಕಿಲೋಮೀಟರ್ ದೂರದಲ್ಲಿ ತನ್ನನ್ನು ಸಾಮೂಹಿಕ ಅತ್ಯಾಚಾರಕ್ಕೆ ಗುರಿಪಡಿಸಲಾಯಿತೆಂದು ಯುವತಿ ಪೊಲೀಸರಿಗೆ ವಿವರಿಸಿದ್ದಾಳೆಂದು ವರದಿ ತಿಳಿಸಿದೆ.