ಗುರುವಾಯೂರಿನಲ್ಲಿ ವಿದೇಶಿ ಮಹಿಳೆ ಫ್ಲಾಟ್‌ನಿಂದ ಹಾರಿ ಆತ್ಮಹತ್ಯೆ
Update: 2016-11-03 14:56 IST
ಗುರುವಾಯೂರ್, ನ. 3: ಇಲ್ಲಿಗೆ ಸಮೀಪದ ಮಮ್ಮಿಯೂರ್ ಎಂಬಲ್ಲಿನ ಫ್ಲಾಟ್‌ನ ಎಂಟನೆ ಮಹಡಿಯಿಂದ ಹಾರಿ ವಿದೇಶಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಮಾಣಿಕೋತ್ತ್ ಎಂಬಲ್ಲಿನ ಹರಿಹರನ್ ಎಂಬವರ ಪತ್ನಿ ರುಮೇನಿಯ ಸಂಜಾತೆ ರೋಬರ್ಟೀನಾ(40) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯೆಂದು ಗುರುತಿಸಲಾಗಿದೆ. ಮಮ್ಮಿಯೂರ್ ದೇವಳ ಸಮೀಪದಲ್ಲಿರುವ ಪಂಚರತ್ನ ಎಂಬ ಫ್ಲಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ.
ಆತ್ಮಹತ್ಯೆಯೆಂದು ಪೊಲೀಸರ ಪ್ರಾಥಮಿಕ ಮಾಹಿತಿ ನೀಡಿದ್ದು ಗುರುವಾರ ಬೆಳಗ್ಗಿನ ಜಾವ 3:30ಕ್ಕೆ ಮಹಿಳೆ ಫ್ಲಾಟಿನಿಂದ ಕೆಳಗೆ ಹಾರಿದ್ದಾರೆ ಎನ್ನಲಾಗಿದೆ. ಐದು ತಿಂಗಳ ಹಿಂದೆ ಈ ವಿದೇಶಿ ಮಹಿಳೆ ಹರಿಹರನ್ ಅವರನ್ನು ವಿವಾಹವಾಗಿದ್ದರು ಎಂದು ವರದಿ ತಿಳಿಸಿದೆ.