ಸೈನಿಕರನ್ನು ವಂಚಿಸಿದ ಕೇಂದ್ರ ಸರಕಾರ: ಅಣ್ಣಾ ಹಝಾರೆ
ಹೊಸದಿಲ್ಲಿ, ನ. 3: ಜಂತರ್ ಮಂತರ್‌ನಲ್ಲಿ ಮಾಜಿ ಸೈನಿಕರೊಬ್ಬರು ಆತ್ಮಹತ್ಯೆಗೈದ ಘಟನೆಯಿಂದ ಕ್ರುದ್ಧರಾಗಿರುವ ಸಮಾಜಸೇವಕ ಅಣ್ಣಾ ಹಝಾರೆ ಪ್ರಧಾನಿಯನ್ನು ಕಟುವಾಗಿ ಟೀಕಿಸಿ ಮತ್ತೆ ಚಳವಳಿಗೆ ದುಮುಕುವ ಬೆದರಿಕೆಯೊಡ್ಡಿದ್ದಾರೆಂದು ವೆಬ್ ಪೊರ್ಟಲೊಂದು ವರದಿ ಮಾಡಿದೆ.
ಸರಕಾರ ನಮ್ಮ ಸೈನಿಕರನ್ನು ವಂಚಿಸಿದೆ:
ಮಾಜಿಸೈನಿಕ ಆತ್ಮಹತ್ಯೆ ಪ್ರಕರಣವನ್ನು ಉದ್ಧರಿಸಿ ಅಣ್ಣಾ ಹಝಾರೆ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುತ್ತ ಸರಕಾರ ನಮ್ಮ ಸೈನಿಕರನ್ನು ವಂಚಿಸಿದೆ ಎಂದಿದ್ದಾರೆ. ಒಂದು ಕಡೆ ಪ್ರಧಾನಿ ಸೈನಿಕರ ಸಾಹಸವನ್ನು ಹೊಗಳುತ್ತಾರೆ. ಇನ್ನೊಂದು ಕಡೆ ಸಮಾನ ಹುದ್ದೆ ಸಮಾನ ಪಿಂಚಣಿ ವಿಷಯ ಬಂದಾಗ ನೀಡಿದ ಭರವಸೆಯನ್ನು ಈಡೇರಿಸುವುದಿಲ್ಲ. ಒಂದುವೇಳೆ ಈ ಭರವಸೆಯನ್ನು ಈಡೇರಿಸುವುದಿಲ್ಲವಾದರೆ ಶೀಘ್ರವೇ ಆಂದೋಲನಕ್ಕೆ ದುಮುಕುವೆ ಎಂದು ಮೋದಿಗೆ ಎಚ್ಚರಿಕೆ ನೀಡಿದ್ದಾರೆ.
ದೇಶ ನಿವಾಸಿಗಳ ಸುರಕ್ಷೆಗಾಗಿ ಸೈನಿಕರು ವೈರಿಗಳ ವಿರುದ್ಧ ಹೊರಾಡುತ್ತಾರೆ:
ಸೈನ್ಯ ಸರಹದ್ದುಗಳಲ್ಲಿ ದೇಶದ ಪ್ರಜೆಗಳಿಗೆ ಸುರಕ್ಷಿತ ವಾತಾವರಣ ನೆಲೆಸಿರುವಂತೆ ಆಗಲು ವೈರಿಸೈನ್ಯದೊಡನೆ ಕಾದಾಡುತ್ತದೆ. ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ವೈರಿಗಳ ಗುಂಡಿಗೆ ನಗುನಗುತ್ತಾ ಎದೆಯೊಡ್ಡುತ್ತದೆ. ಗಾಯಗೊಳ್ಳುತ್ತದೆ. ಆದರೆ ರಾಜಕಾರಣಿಗಳು ಭರವಸೆಯನ್ನು ನೀಡುವುದು ಹೊರತು ಇನ್ನೇನು ಕೊಡುವುದಿಲ್ಲ ಎಂದು ಅಣ್ಣಾಹಝಾರೆ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಒಂದುವೇಳೆ ಆರೋಗ್ಯ ಕೈಕೊಟ್ಟರು ಕೂಡಾ ಸೈನಿಕರಿಗಾಗಿ ಆಂದೋಲನ ನಡೆಸಲು ತಾನು ಹಿಂಜರಿಯಲಾರೆ ಎಂದೂ ಹೇಳಿದ್ದಾರೆ.
ಮಾಜಿ ಸೈನಿಕನಿಂದ ಆತ್ಮಹತ್ಯೆ:
ಬುಧವಾರ ಜಂತರ್ ಮಂತರ್‌ನಲ್ಲಿ ಮಾಜಿ ಸೈನಿಕರೊಬ್ಬರು ಒಂದೇ ಶ್ರೇಣಿ ಒಂದೇ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಇದರಿಂದಾಗಿ ಅಣ್ಣಾ ಹಝಾರೆ ಮೋದಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆಂದು ವರದಿ ತಿಳಿಸಿದೆ.