ನಾಯಿಗಳನ್ನು ಓಡಿಸಲು ಇಂಜಿನಿಯರಿಂಗ್ ಅಧ್ಯಾಪಕರಿಂದ "ಸುಡಾಗ್" ಯಂತ್ರ
ಲಕ್ಕಿಡಿ, ನ. 3: ಇನ್ನು ಯಾರೂ ಬೀದಿನಾಯಿಗಳಿಗೆ ಹೆದರಿ ಹೊರಗೆ ಬರದೆ ಅಡಗಿ ಕೂತುಕೊಳ್ಳಬೇಕಿಲ್ಲ. ಬೀದಿನಾಯಿಗಳನ್ನು ಓಡಿಸಲಿಕ್ಕಾಗಿಯೇ ಕಡಿಮೆ ಮೌಲ್ಯದ ಯಂತ್ರವೊಂದನ್ನು ಇಂಜಿನಿಯರಿಂಗ್ ಅಧ್ಯಾಪಕರು ಆವಿಷ್ಕರಿಸಿದ್ದಾರೆ. ಸೆನ್ಸರ್‌ನಲ್ಲಿ ಕಾರ್ಯನಿರ್ವಹಿಸುವ ಯಂತ್ರ ನಿರ್ಮಾಣಕ್ಕೆ ಕೇವಲ ಸಾವಿರ ರೂಪಾಯಿಯೂ ಬೇಕಿಲ್ಲ. ಪಾಲಕ್ಕಾಡ್ ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರಾದ ಜಿಜೊ ಜೋಸ್, ಮೆರಿನ್, ಜ್ಯೋತಿಷ್ ಸುಡಾಗ್ ಎಂಬ ಈ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.
12 ವೋಲ್ಟ್ ಬ್ಯಾಟರಿಯಲ್ಲಿಕೆಲಸ ಮಾಡುವ ಈ ಯಂತ್ರ ಐದು ಮೀಟರ್ ವ್ಯಾಪ್ತಿಯಲ್ಲಿ ನಾಯಿ ಕಂಡು ಬಂದರೆ ಜಾಗೃತಗೊಳ್ಳುತ್ತದೆ. ಅದರ ಸೆನ್ಸರ್ ಅದನ್ನು ಗ್ರಹಿಸುತ್ತದೆ. ಅದರಿಂದ ಹೊರಬರುವ ಕಂಪನಗಳು ಜೀವಿಗಳಿಗೆ ಕಿರಿಕಿರಿಒಡ್ಡುತ್ತದೆ. ಮನುಷ್ಯ ಎತ್ತರದ ದೇಹಾಕೃತಿಯವನಾದ್ದರಿಂದ ಮನುಷ್ಯನಿಗೇನೂ ಆಗುವುದಿಲ್ಲ. ಯಂತ್ರದ ಸಾಮರ್ಥ್ಯ 25,000 ಕಿಲೊಹರ್ಟ್ಸ್‌ಆಗಿದೆ. ಸೆನ್ಸರ್ ಜಾಗೃತಗೊಂಡರೆ ನಿರಂತರ ಇದು ನಾಯಿಗಳಿಗೆ ತಾಳುವ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ನಾಯಿ ಪ್ರಾಣರಕ್ಷಣಾರ್ಥ ಓಡಿ ಹೋಗಲಿದೆ. ಸೆನ್ಸರ್ ಜಾಗೃತಗೊಂಡ ಮೇಲೆ ಕೇವಲ ಒಂದೇ ನಿಮಿಷ ಕೆಲಸ ಮಾಡುತ್ತದೆ. ನಾಯಿಗಳನ್ನು ಓಡಿಸಲು ಅಷ್ಟು ಸಾಕಾಗುತ್ತದೆ.
ಇಂತಹ ಯಂತ್ರಗಳು ಮಾರುಕಟ್ಟೆಯಲ್ಲಿದ್ದರೂಅವುಗಳಿಗೆ ಇದಕ್ಕಿಂತ ನಾಲ್ಕುಪಟ್ಟು ಹೆಚ್ಚು ಬೆಲೆ ಇದೆ.. ಈ ಯಂತ್ರಗಳ ಬೆಲೆ 700,800ರೂಪಾಯಿಯೊಳಗೆ ಇರುತ್ತದೆ ಎಂದು ಅಧ್ಯಾಪಕರು ತಿಳಿಸಿದ್ದಾರೆ. ಈಗ ಅಧ್ಯಾಪಕರು ಯಂತ್ರ ನಿರ್ಮಿಸಲು ಕಂಪೆನಿಗಳನ್ನು ಸಂಪರ್ಕಿಸುವ ಸಿದ್ಧತೆಯಲ್ಲಿದ್ದಾರೆಂದು ವರದಿ ತಿಳಿಸಿದೆ.