ಮುಂದಿನ ಎಪ್ರಿಲ್ 1ರಿಂದ ಜಿಎಸ್‌ಟಿ ಜಾರಿ; ಆಹಾರ ಧಾನ್ಯಗಳಿಗೆ ವಿನಾಯ್ತಿ
Update: 2016-11-03 18:20 IST
ಹೊಸದಿಲ್ಲಿ,ನ.3: ಮುಂದಿನ ವರ್ಷದ ಎಪ್ರಿಲ್ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಪದ್ಧತಿ ಜಾರಿಯಾಗಲಿದ್ದು, ಆಹಾರ ಧಾನ್ಯಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆ ದರವನ್ನು ನಿದಿಪಡಿಸಲಾಯಿತು.
ಒಟ್ಟು ನಾಲ್ಕು ಹಂತದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.ವಿವಿಧ ವಸ್ತುಗಳ ಮೇಲೆ ಶೇ,5, ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಾಹಿತಿ ನೀಡಿದರು.
ಅಗತ್ಯ ವಸ್ತುಗಳ ಮೇಲೆ ಶೇ,5ರಷ್ಟು ದರ, ಎಲೆಕ್ಟ್ರಾನಿಕ್ಸ್ ನಸ್ತುಗಳು, ಐಶರಾಮಿ ಕಾರು, ಸಿಗರೇಟ್ ಗೆ ಶೇ 28ರಷ್ಟು ತೆರಿಗೆ ವಿಧಿಸಲಾಗುವುದು ಎಂದು ವಿವರಿಸಿದರು.