×
Ad

ಪ್ರಸಾರ ನಿಷೇಧ ಆದೇಶಕ್ಕೆ ಎನ್‌ಡಿಟಿವಿ ಪ್ರತಿಕ್ರಿಯೆ

Update: 2016-11-04 08:32 IST

ಹೊಸದಿಲ್ಲಿ, ನ.4: ಎನ್‌ಡಿಟಿವಿಯ ಹಿಂದಿ ಚಾನಲ್ ಪ್ರಸಾರ ನಿಷೇಧಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶ ವಿರುದ್ಧ ಸುದ್ದಿವಾಹಿನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎನ್‌ಡಿಟಿವಿ ಇದಕ್ಕೆ ನೀಡಿರುವ ಪ್ರತಿಕ್ರಿಯೆ ಹೀಗಿದೆ:

 "ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶ ಕೈಸೇರಿದೆ. ಈ ರೀತಿಯಲ್ಲಿ ಎನ್‌ಡಿಟಿವಿ ದಮನಿಸಲು ಹೊರಟಿರುವುದು ದಿಗ್ಭ್ರಮೆ ಮೂಡಿಸಿದೆ. ಪ್ರತಿ ಚಾನಲ್ ಹಾಗೂ ಪತ್ರಿಕೆ ಒಂದೇ ರೀತಿಯ ಕವರೇಜ್ ನೀಡಿವೆ. ಅದರಲ್ಲೂ ಎನ್‌ಡಿಟಿ ಕವರೇಜ್ ಹೆಚ್ಚು ಸಮತೋಲಿತವಾಗಿತ್ತು. ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸಿದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಬಳಿಕ, ಈ ರೀತಿಯನ್ನು ಎನ್‌ಡಿಟಿವಿ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಈ ವಿಷಯದ ಬಗೆಗಿನ ಎಲ್ಲ ಸಾಧ್ಯತೆಗಳ ಬಗ್ಗೆಯೂ ಎನ್‌ಡಿಟಿವಿ ಪರಿಶೀಲಿಸುತ್ತಿದೆ".

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News