×
Ad

ಭೋಪಾಲ್‌ ಎನ್‌ಕೌಂಟರ್‌ ಪ್ರಕರಣದ ನ್ಯಾಯಾಂಗ ತನಿಖೆ; ಸಿಎಂ ಶಿವರಾಜ್ ಸಿಂಗ್ ಚೌಹಾನ್‌

Update: 2016-11-04 09:52 IST

ಭೋಪಾಲ್‌, ನ.4: ಭೋಪಾಲ್‌ನಲ್ಲಿ  ನಿಷೇಧಿತ  ಸಿಮಿ ಸಂಘಟನೆಯ ಎಂಟು ಮಂದಿ ಕಾರ್ಯಕರ್ತರು ಎನ್ ಕೌಂಟರ್‌ಗೆ ಬಲಿಯಾದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದ್ದು, ನಿವೃತ್ತ ನ್ಯಾಯಮೂರ್ತಿ ಎಸ್‌.ಕೆ.ಪಾಂಡೆ ಪ್ರಕರಣದ ತನಿಖೆ ನಡೆಸಲಿದ್ದಾರೆಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ತಿಳಿಸಿದ್ದಾರೆ.
ಭೋಪಾಲ್ ಜೈಲಿನಲ್ಲಿ ಭದ್ರತಾ ಸಿಬ್ಬಂದಿಯನ್ನು ಕೊಂದು ಪರಾರಿಯಾಗಿದ್ದ 8 ಮಂದಿ ವಿಚಾರಾಧೀನ ಖೈದಿಗಳನ್ನು ಪೊಲೀಸರು ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಿದ್ದರು. 
ನೆಲದಲ್ಲಿ ಗಾಯಗೊಂಡು ಬಿದ್ದಿದ್ದ ಓರ್ವ ವ್ಯಕ್ತಿಯ ಮೇಲೆ ಜವಾನನೊಬ್ಬ ಗುಂಡು ಹಾರಿಸುತ್ತಿರುವ ವೀಡಿಯೊ ತುಣುಕುಗಳನ್ನು ಪರಿಶೀಲಿಸಿದ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ನಾಯಕರು  ಎನ್‌ಕೌಂಟರ‍್  ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News