ಮಲೇರ್ಕೋಟ್ಲಾದಲ್ಲಿ ಕುರ್‌ಆನ್ ಗೆ ಅವಮಾನ ಪ್ರಕರಣದಲ್ಲಿ ಹೊಸ ತಿರುವು

Update: 2016-11-04 05:34 GMT

ಲುಧಿಯಾನ,ನ.4 : ಮಲೇರ್ ಕೋಟ್ಲಾದಲ್ಲಿ ಕುರಾನ್ ಗೆ ಅವಮಾನ ಮಾಡಿದ ಘಟನೆ ನಡೆದು ನಾಲ್ಕು ತಿಂಗಳುಗಳ ನಂತರ, ಈ ಪ್ರಕರಣದ ಪ್ರಮುಖ ಆರೋಪಿ, ದೆಹಲಿ ಮೂಲದ ಉದ್ಯಮಿ ವಿಜಯ್ ಕುಮಾರ್ ಮಹತ್ವದ ಹೇಳಿಕೆಯೊಂದನ್ನು ನೀಡಿ ತಾನು ನಿರಪರಾಧಿ ಹಾಗೂಈ ಪ್ರಕರಣದಲ್ಲಿ ಎಎಪಿ ಶಾಸಕ ನರೇಶ್ ಯಾದವ್ ಅವರ ಹೆಸರನ್ನು ಉಲ್ಲೇಖಿಸುವಂತೆ ಪೊಲೀಸರು ತನ್ನನ್ನು ಬಲವಂತಪಡಿಸಿದ್ದರು ಎಂದುಹೇಳಿಕೊಂಡಿದ್ದಾರೆ.

ಈ ಪ್ರಕರಣದ ಸಂಬಂಧ ವಿಚಾರಣೆಗೆಂದು ಸಂಗ್ರೂರು ನ್ಯಾಯಾಲಯಕ್ಕೆ ಹಾಜರಾದ ಸಂದರ್ಭ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ತನ್ನನ್ನುಶಿರೋಮಣಿ ಅಕಾಲಿದಳ-ಬಿಜೆಪಿ ಸರಕಾರದ ನಿರ್ದೇಶನದಂತೆ, ಮುಖ್ಯವಾಗಿ ಬಾದಲ್ ಕುಟುಂಬದಿಂದಾಗಿ ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಲಾಗಿದೆ ಎಂದು ನರೇಶ್ ಯಾದವ್ ಹೇಳಿದ್ದಾರೆ.

ಜೂನ್ 24 ರ ರಾತ್ರಿ ಕುರಾನ್ ಗ್ರಂಥದ ಹರಿದ ಪುಟಗಳು ಸಂಗ್ರೂರು ಜಿಲ್ಲೆಯ ಮಲೇರ್ ಕೋಟ್ಲಾ ಪಟ್ಟಣದ ಜರ್ಗ್ ಚೌಕ್ ಪ್ರದೇಶದಲ್ಲಿರಸ್ತೆ ಬದಿಯಲ್ಲಿ ಪತ್ತೆಯಾಗಿದ್ದವು. ಅದೇ ರಾತ್ರಿ, ಉದ್ರಿಕ್ತರ ಗುಂಪೊಂದು ಮಲೇರ್ ಕೋಟ್ಲಾ ಶಾಸಕ ಫರ್ಝಾನಾ ಆಲಂ ಅವರ ನಿವಾಸದ ಮೇಲೆ ದಾಳಿ ನಡೆಸಿ,ಅಲ್ಲಿನ ಪೀಠೋಪಕರಣಗಳಿಗೆ ಹಾನಿಗೈದು ಮೂರು ವಾಹನಗಳಿಗೂ ಬೆಂಕಿಯಿಕ್ಕಿತ್ತು.

ಈ ಘಟನೆ ನಡೆದು ಕೆಲ ದಿನಗಳ ನಂತರ ಪೊಲೀಸರು ಕುಮಾರ್ ಹಾಗೂ ಇತರ ಇಬ್ಬರಾದ ನಂದ್ ಕಿಶೋರ್ ಹಾಗೂ ಅವರ ಪುತ್ರ ಗೌರವ್ ಅವನ್ನು ಬಂಧಿಸಿದ್ದರು. ಎಎಪಿ ಶಾಸಕ ನರೇಶ್ ಯಾದವ್ ತಮಗೆಕುರಾನ್ ಅವಮಾನಗೈಯ್ಯಲು ಒಂದು ಕೋಟಿ ನೀಡುವುದಾಗಿ ಹೇಳಿದ್ದರು ಆದರೆ ಆ ಮೊತ್ತ ತನಗೆ ದೊರಕಿರಲಿಲ್ಲ ಎಂದುಪೊಲೀಸ್ ಕಸ್ಟಡಿಯಲ್ಲಿರುವಾಗ ಕುಮಾರ್ ಹೇಳಿದ್ದರೆನ್ನಲಾಗಿದೆ.

ಆದರೆ ಗುರುವಾರ ಕೋರ್ಟ್ ವಿಚಾರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್‌ತಾನು ನಿರಪರಾಧಿ ಎಂದು ಸಾಬೀತು ಪಡಿಸಲು ತಮ್ಮ ಬಳಿ ಸಾಕ್ಷಿಯಿದೆ ಎಂದು ಹೇಳಿದ್ದರು.ಯಾದವ್ ಅವರ ಹೆಸರನ್ನು ಹೇಳದೇ ಇದ್ದರೆ ನನ್ನನ್ನು ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಲ್ಲಿ ಸಿಕ್ಕಿಸಿ ಹಾಕಲಾಗುವುದು ಎಂದು ಬೆದರಿಸಲಾಗಿತ್ತು, ಎಂದಿದ್ದಾರೆ.

ಯಾದವ್ ಅವರನ್ನು ಈ ಪ್ರಕರಣದ ಸಂಬಂಧ ಜುಲೈ 25 ರಂದು ಬಂಧಿಸಲಾಗಿತ್ತು.ವಿಜಯ್ ಕುಮಾರ್ ಹಾಗೂ ಇತರ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಒಂದು ವಾರದ ತರುವಾಯ ಜುಲೈ 31 ರಂದು ಯಾದವ್ ಅವರಿಗೆ ಜಾಮೀನು ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News