ದಲಿತರ ಮೇಲಿನ ಅಪರಾಧದ ಬಗ್ಗೆ ಪ್ರಧಾನಿ ಮೋದಿಯಿಂದ ಗೇಲಿ ?

Update: 2016-11-04 06:24 GMT

ಹೊಸದಿಲ್ಲಿ, ನ.4: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದಲಿತರ ವಿರುದ್ಧದ ಅಪರಾಧಗಳ ವಿಚಾರದಲ್ಲಿ ನಿಂದನಾತ್ಮಕ ಹಾಗೂ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಉದುರಿಸಿದ ಅಣಿ ಮುತ್ತೊಂದು ಇಲ್ಲಿದೆ.  

‘‘ಇದು ಕಳವಳಕಾರಿಯಾದ ಸಂಗತಿ... ದೇಶವನ್ನು ಒಂದುಗೂಡಿಸುವ ವಿಚಾರಗಳನ್ನು ಮತ್ತಷ್ಟು ಬಲಪಡಿಸುವುದು ಹೇಗೆ ? ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ನಾನು ಹೇಳಿದ್ದು ತಪ್ಪಾಗಿದ್ದರೆ ನನ್ನನ್ನು ತಿದ್ದಿ.’’

‘‘ಹಿಂದೆಲ್ಲಾ ಅಪಘಾತವೊಂದು ನಡೆದಾಗ ಸುದ್ದಿ ಹೀಗಿರುತ್ತಿತ್ತು. ‘‘ಗ್ರಾಮವೊಂದರಲ್ಲಿ ಅಪಘಾತ ನಡೆದಿದೆ. ಒಂದು ಟ್ರಕ್ ಮತ್ತು ಸೈಕಲ್ ಸವಾರ. ಗಾಯಾಳುವಾಗಿದ್ದಾರೆ. ಇಲ್ಲವೇ ಸಾವಿಗೀಡಾಗಿದ್ದಾರೆ.’’

‘‘ನಿಧಾನವಾಗಿ ಬದಲಾವಣೆಗಳು ಕಾಣಲಾರಂಭಿಸಿದವು. ‘ಹಳ್ಳಿಯೊಂದರಲ್ಲಿ ಹಾಡುಹಗಲೇ ಮದ್ಯದ ನಶೆಯಲ್ಲಿದ್ದ ಚಾಲಕನ ನಿರ್ಲಕ್ಷ್ಯದ ವಾಹನ ಚಲಾವಣೆ ಮುಗ್ಧನೊಬ್ಬನ ಬಲಿ ಪಡೆಯಿತು.’’

‘‘ಮತ್ತೆ ನಿಧಾನವಾಗಿ ವರದಿ ಮಾಡುವ ರೀತಿ ಬದಲಾಯಿತು. ‘ಒಂದು ಬಿಎಂಡಬ್ಲ್ಯೂ ಕಾರು (ಸ್ವಲ್ಪ ಹೊತ್ತು ಸುಮ್ಮನಾಗಿ ಸಭಿಕರು ಜೋರಾಗಿ ನಗಲು ಅನುವು ಮಾಡುತ್ತಾರೆ) ದಲಿತನೊಬ್ಬನನ್ನು ಸಾಯಿಸಿತು’ (ಮತ್ತೆ ಸುಮ್ಮನಾದಾಗ ಸಭಿಕರು ನಗುತ್ತಾರೆ).’’

‘‘ಸರ್, ನನ್ನನ್ನು ಕ್ಷಮಿಸಿ, ಆದರೆ ಬಿಎಂಡಬ್ಲ್ಯೂ ಕಾರಿಗೆ ಆತ ದಲಿತನೆಂದು ಗೊತ್ತಿರಲಿಲ್ಲ. ( ಸಭಿಕರಲ್ಲಿದ್ದ ಪತ್ರಕರ್ತರು ಜೋರಾಗಿ ನಗುತ್ತಾರೆ.)

ಸಂಪೂರ್ಣ ಭಾಷಣಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಈ ವಿಷಯಕ್ಕೆ ವೀಡಿಯೋದಲ್ಲಿ 1.31ನೇ ನಿಮಿಷಕ್ಕೆ ಹೋಗಿ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News